ಮಾನವ ಮೂಢಾ | ಕೇಳದೆ ನೀ ಕೆಡಬ್ಯಾಡಾ |
ಶೀಲವರಿತುಕೋ ದೃಢಾ | ಹೇಳುವೆ ನಿಜ ಹಿತ ನೋಡಾ ಪ
ಹಾದ್ಯರಿಯದೆ ಪ್ರಚಂಡಾ ಓದಿಕೆ ಯಾಕ ಉದಂಡಾ |
ಸಾಧಿಸೋ ಸಾಧನ ಕಾಂಡದ ಬೋಧಿಪ ಮಾರ್ತಾಂಡ |
ವಾದ ವಿತ್ತಂಡ ಬಿಡು ಪಾಷಂಡಾ 1
ಹರಿಗುಣ ಕೊಂಡಾಡು ನೀ ಅಖಂಡಾ ಕೇಳು ಕೇಳು ಪ್ರಾಣಿ |
ಕರಣ ತ್ರಯಂಗಳ ಬೆರಿಸಿ ಮೊರೆಹೋಗಾಭಾವನೆ ಬಲಿಸಿ |
ಗುರುವಿಗೆ ಭಾರೊಪ್ಪಿಸಿ ಇರು ಸಂಶಯವಾ ತ್ಯಜಿಸಿ |
ನೆರೆ ಜೌಭಾಗಿಸಿ ತನ ಬಿಡು ಹೇಸಿ ಕುಜನ ದುರಾಶೀ
ನದಿಯೊಳು ಸೋಸಿ 2
ಗರುವ ಮುರಿದು ನಿದ್ರ್ವಂದಾ ಚರಿಸಿ ಹಿರಿಯರ ವೃಂದಾ |
ಪರಿಯಲಿ ನಡಿನೀ ನೆಂದಾ ಗುರುವರ ಮಹಿಪತಿ ಕಂದಾ |
ಪಡದರ ಬಂದಾ |
ಜನ್ಮಕ ಛಂದಾ ನೋಡಿದರಿಂದಾ ಕೇಳು ಪ್ರಾಣಿ 3