ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದೇ ಹೌದು ಭವತರಿಯುವ ಶಸ್ತ್ರ ಪದೇ ಪದೇ ಸಿರಿವರನ ಸ್ತೋತ್ರ ಪ ಅಧಮಮತಿಯ ಬಿಟ್ಟು ಸದಮಲ ಮನದಿಂ ವಿಧವಿಧ ಹರಿಯೆಂದೊದುರುತ ಕಾಣುವುದೆ ಅ.ಪ ದಾನಧರ್ಮಯಜ್ಞ ಇವು ಯಾಕೊ ಸ್ನಾನ ಮೌನ ಜಪ ಮತ್ತ್ಯಾಕೊ ನಾನಾ ಮಂತ್ರ ತಂತ್ರ ಗೋಜ್ಯಾಕೆಬೇಕೊ ಕ್ಷೋಣಿ ತಿರುಗಿ ಬಹು ದಣಿಲ್ಯಾಕೊ ನಾನಾಪರಿಯಲಿಂದ ದೀನದಯಾಪರ ಗಾನಲೋಲನ ಭಜನಾನಂದ ಪಡೆವುದೆ1 ವೇದಪುರಾಣ ಪುಣ್ಯ ಶಾಸ್ತ್ರಗಳ್ಯಾತಕೊ ಸಾಧನಸಿದ್ಧಿಗಳ ಬಲವ್ಯಾಕೋ ಭೇಧಯೋಗದ ಬಹು ಬೋಧಗಳ್ಯಾತಕೊ ಓದಿಓದಿ ದಿನಗಳಿಲ್ಯಾಕೊ ವೇದಗಮ್ಯದಾದಿ ಮೂರುತಿ ಶ್ರೀ ಪಾದವರಿತು ಆರಾಧಿಸುತಿರುವುದೆ 2 ಕಾಶಿ ಕಂಚಿ ಕಾಳಹಸ್ತಿ ತಿರುಗಲ್ಯಾಕೊ ಸಾಸಿರದೈವಕೆ ಬಾಗುವುದ್ಯಾಕೊ ಮಾಸಪಕ್ಷ ವ್ರತ ನೇಮಗಳ್ಯಾತಕೊ ಘಾಸಿಯಾಗಿ ದೇಹ ದಂಡಿಸಲ್ಯಾಕೊ ಶೇಷಶಯನ ನಮ್ಮ ಶ್ರೀಶ ಶ್ರೀರಾಮನ ಲೇಸಾದ ನಾಮವೊಂದೆ ಧ್ಯಾಸದಿಟ್ಟು ನುಡಿ 3
--------------
ರಾಮದಾಸರು
ತಾನೆ ಬ್ರಹ್ಮಪುಟ್ಟಿರೆ ಮಾನವರೆದೆಂಬರಯ್ಯತಾನೆ ತನ್ನ ತಿಳಿದು ನೋಡೆ ತಾನೆ ಚಿದಾನಂದ ವಸ್ತು ತಾನೆ ಬ್ರಹ್ಮ ಪುಟ್ಟಿರೆ ಪ ತಂದೆ ತಾಯಿಯೆಂಬುವರು ಒಂದನ್ನೂ ಮಾಡಲಿಲ್ಲಇಂದು ಕಿವಿ ಮೂಗು ತಾಳಿ ಬಂದಿದೆ ಸಾಕ್ಷಾತ್ ವಸ್ತುತಾನೆ ಬ್ರಹ್ಮಯಿರುತಲಿದೆ 1 ಭಾವ ಕಲ್ಪಿತವಲ್ಲದ ದೇವನೆ ತಾನಾಗಿರೆದೇವತೆಯೆಂಬುದ ಮರೆತು ಕಲ್ಲದೇವರ ಪೂಜಿಪರಯ್ಯಾತಾನೆ ಬ್ರಹ್ಮ ಇರುತಲಿರೆ 2 ಕಾರಣಪುರುಷನಾಗಿ ದೇಹವನ್ನೇ ಧರಿಸಿರೆಕಾರಣಪುರುಷನ ಬಿಟ್ಟು ಬೇರೆ ಧ್ಯಾನಿಸುವರಯ್ಯಾತಾನೆ ಬ್ರಹ್ಮ ಪುಟ್ಟಿರೆ3 ವೇದಶಾಸ್ತ್ರಪುರಾಣದ ಓದೆಲ್ಲ ತಾನೆ ಇರೆಓದನ್ನು ತಿಳಿಯದ ತಾವು ಓದಿಓದಿ ಸಾವರಯ್ಯೋ ತಾನೇ ಬ್ರಹ್ಮ ಪುಟ್ಟಿರೆ 4 ಇಂದು ಹರವಾಸರೆಂದು ಬಂಧ ಹೆಸರ ಮಾಡುತಬಂಧ ಹರ ಚಿದಾನಂದಗೆ ಒಂದು ಕುತ್ತ ಎಣಿಸರಯ್ಯೋ ತಾನೆ ಬ್ರಹ್ಮ ಪುಟ್ಟಿರೆ 5
--------------
ಚಿದಾನಂದ ಅವಧೂತರು