ನಾನೆಂತರಿವೆನೈ ನಿನ್ನಂತರಂಗವ
ಸಾನಂದಗೋವಿಂದ ನೀನಿಂದು ದಯೆದೋರು ಪ
ಆದಿ ಮೂರುತಿಯೆ ನಾನೀದೀನ ನರ
ಭೇದರಹಿತನೇ ಅದರ ಹಾದಿಯರಿಯೆನೊ
ವೇದ ವಂದ್ಯನು ನೀನು ಓದನರಿಯದ ನಾನು
ಸಾಧುರಕ್ಷಕ ಸ್ವಾಮಿ ಬೇದಯ ತಿಳಿಸೊ 1
ಜ್ಞಾನಪ್ರಕಾಶ ನಾ ಮಾನಾಭಿಮಾನಿ
ಮೌನಿರಕ್ಷಕನೇ ಆಂ ಹೀನನಡೆಯವ
ದಾನಿಪರಮಾತ್ಮನು ದೀನ ತಾಪತ್ರಿಯೆನು
ನೀನಮೃತದವನೈ ನಾನು ಮತ್ರ್ಯನು 2
ಸರುವಲೋಕೇಶಾ ನಾಪರದೇಶಿಯಹುದೋ
ಸಿರಿದೇವಿಯರಸಾ ದಾಸ ತಿರಿದುಂಬೊತಿರುಕ
ಶರಣಸುಧಾರಕ ಬಿರುದಿನಿಂ ಮೆರೆಯುವ
ವರದ ಜಾಜೀಶ ಪೊರೆ ಶ್ರೀನಿವಾಸ 3