ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಾಮಕೃಷ್ಣವಿಠಲ | ಪೊರೆಯ ಬೇಕಿವಳಾ ಪ ಸನ್ನುತ ಹರಿಯೆ | ಪ್ರಾರ್ಥಿಸುವೆ ಧೊರೆಯೇ ಅ.ಪ. ಮೋದ ತೀರ್ಥರ ಮತದಿ | ಉದುಭವಿಸಿ ಇರುತಿರ್ಪಸಾಧು ಕನ್ನಿಕೆ ಇವಳಾ | ವೇದಾಂತ ವೇದ್ಯಾ |ಮೋದದಾಯಕನಾಗಿ | ಶ್ರೀಧರನೆ ತರತಮವಭೇಧ ಪಂಚಕ ತಿಳಿಸಿ | ಕಾದುಕೋ ಬಿಡದೆ 1 ಅಹಿಕ ಪಾರತ್ರಿಕದಿ | ಬಹುಸಖ್ಯಗಳ ಕೊಟ್ಟುಮಹಿತ ನಿನ್ನಯ ನಾಮ | ರೂಪಕ್ರಿಯ ಗುತಾಮವಿಹಿತ ಮಾರ್ಗದಿ ತುತಿಸಿ | ತವಚರಣಕರ್ಪಿಸುವಮಹಭಾಗ್ಯ ಇವಳೀಗೆ | ಓದಗಿಸೋ ಹರಿಯೇ 2 ಅಡಿಗಡಿಗೆ ಬರುತಿರ್ಪ | ಕಡುವಿಘ್ನ ಪರಿಹರಿಸೊಕಡುದಯಾ ಪರಿಪೂರ್ಣ | ಕರಿವರದ ಕೃಷ್ಣಾ ಬಡವಿಪ್ರಗೊಲಿದಂತೆ | ಭಕುತ ಜನ ಪರಿಪಾಲಪಿಡಿಯುವುದು ಕೈ ಇವಳ | ಬಾಲ ಗೋಪಾಲ 3 ಕಲಿಯುಗದಿ ಸಾಧನವು | ಬಲುಕಷ್ಟವೆನಿಸಿಹುದುಕಲಿಮಲಾಪಹಗಂಗೆ | ಪಿತನ ಚರಣಾಬ್ಜಾಓಲುಮೆಯಿಂ ಭಜಿಪರ್ಗೆ | ಭವಭಂಧ ಪರಿಹಾರಅಳವಡಿಸೊ ಇವಳೀಗೆ | ತವನಾಮಕವಚಾ 4 ಕೋವಿದರ ಪರಿಪಾಲ | ಪಾವಮಾನಿಯ ಪ್ರೀಯನೋವು ಸುಖ ದ್ವಂದ್ವಗಳ | ಸಮತೆಯಲಿಯುಂಬಾಭಾವವನೆ ಕರುಣಿಸುತ | ಭವವ ನುತ್ತರಿಸೆಂದುದೇವ ಗುರು ಗೋವಿಂದ | ವಿಠಲ ಪ್ರಾರ್ಥಿಸುವೇ 5
--------------
ಗುರುಗೋವಿಂದವಿಠಲರು