ಏನಿದು ಬರಿ ಮಾಯೆ ತೋರ್ಪುದಿದೆಲ್ಲವು ಪುಸಿಮಾಯೆ
ಮಾನಿನಿ ಮನೆಮನೆ ವಾರ್ತೆ ಮಕ್ಕಳು
ತಾನಿದು ಕನಸಿನ ಬಾಳ್ವೆ ನಿದಾನ ಪ
ಕೇರೆಯ ನುಂಗಿ ಓತಿ ಕೊಸರುತಿರಲು ತೆರೆಯಿತೆನಗೆ ಕಣ್ಣು
ತೆರೆಯಕ್ಷುಧೆಗೇನು ಕಾಣೆನುಗತಿಯ 1
ಯಾವಾವ ತನು ವಿಡಿದು ಬರುವುದೋ ಆವಾವ ಠಾವಿನಲಿ
ಜೀವ ಜೀವವ ತಿಂದು ಜೀವಿಸಿಕೊಂಡು
ಸಾಯುತ ಜನಿಸುತಲಿರುವುದು ಪ್ರಾಣಿ 2
ತಿಳಿಯಲೊಂದಕೆ ಒಂದು ತಿನಿಸಿಗೆ ಬೆಲೆ ಮಾಡಿದವ ಬೇರೆ
ಬಳಗು ಹೊರಗು ತಾನೆ ಬೆಳಗುತಲಿರುವನು
ಚಲನ ಭವನ ಕೋಣೆ ಲಕ್ಷ್ಮೀರಮಣ 3