ಮಾಡು ಮನವನು ಬರಮಾಡು ಹರಿಯನು
ಸ್ಥಿರ ಮಾಡು ಮನವನು ಪ
ಜೋಡಿಸಿ ಕರಗಳ ಕರೆದರೆ
ಓಡುತ ಓಡುತಲಿವ ಬರುವನುಅ.ಪ
ನಾಳೆ ನಾಳೆ ಎನ್ನಬೇಡ
ಕಾಲ ನಿನ್ನಧೀನವಲ್ಲ
ಕೇಳಿದರಾಕ್ಷಣ ಕರುಣಾಶೀಲನು
ಆಲಯಕಿವ ಬರುವನು 1
ಕಾಮಧೇನು ಕಲ್ಪವೃಕ್ಷ
ಈ ಮಹಾಮಹಿಮಗೆ ಸಮವೇ
ಪ್ರೇಮದಿ ಪೂಜಿಸಿದಾತಗೆ
ಕ್ಷೇಮವ ಭಾಮೆಯ ಪ್ರಿಯ ಕೊಡುವನು 2
ಮನಗೆÉ ಬಂದರೀತನೊಮ್ಮೆ
ಜನಕೆ ಬಂದುದೆಂಥ ಹೆಮ್ಮೆ
ಪ್ರಣಯ ಸುಧೆಯ ಸವಿರಸವನು
ಮನೆಯಲಿ ತುಂಬುವನು ಪ್ರಸನ್ನನು 3