ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಓಂ ನಮೋ ಮಹೀಪತಿ ಸದಾನಂದ ಗುರುಮೂರ್ತಿ | ಸನ್ನುತ ನಿಮ್ಮ ಖ್ಯಾತಿ ಪೊಗಳಲಾಪೆನೆ ಕೀರ್ತಿ ಪ ತನ್ನ ತಾ ಮರೆದವರಾ | ನೀನು ಕೊಟ್ಟು ಎಚ್ಚರಾ | ಮುನ್ನಿ ನಂದದಿ ಮಾಡಿ | ಓಡಿಸಿದೇ ಭವದೂರಾ 1 ಸಹಜ ಬೀರುವ ವಚನಾ | ಅದೇ ಉಪದೇಶ ಜ್ಞಾನಾ| ಇಹ ಪರಕ ನಿಧಾನಾ | ಮಾಡುವದು ಸಾವಧಾನಾ2 ವೇದ ಸಿದ್ಧಾಂತದಲ್ಲಿ | ರಾಜಯೋಗ ಮನೆಯಲ್ಲಿ | ಬೋಧಿಸುವ ವಸ್ತು ನೀನೇ | ಸರಿಗಾಣೆ ನಾನೆಲ್ಲಿ3 ಏನು ಪುಣ್ಯವೋ ಎನ್ನಾ | ಅದೇ ಬಾಲಕ ನಿನ್ನಾ | ತಾನೇನ ಸಾಧುವೆನಗ | ಇರಲು ನಿಮ್ಮ ದಯಾಘನಾ 4 ದಾಸರಾ ದಾಸನೆಂದು | ಇನ್ನು ನೋಡದೆವೆ ಕುಂದು | ಭಾಸಿ ಪಾಲಿಸು ಕೃಷ್ಣಗ ಎಂದೂ | ಕೈಯ್ಯಾ ಬಿಡೆನೆಂದು5
--------------
ಕಾಖಂಡಕಿ ಶ್ರೀ ಕೃಷ್ಣದಾಸರು