ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಡುವ ಬಾರೋ ಕೃಷ್ಣ ಓಡಿಬಾರೋ ಪ ನಾಡೆ ನಿನ್ನ ನೋಡಬಯಸಿ ಹಾಡುವೆನ್ನ ಕಣ್ಣಮುಂದೆ ಅ.ಪ ಓಡಿಬರುವೆ ನೀನು ಎಂದು ನೋಡಿ ಹಸುಗಳತ್ತ ಇತ್ತ ಬೇಡುತಿಹವು ನಿನ್ನ ಬರವ ಮೋಡಿಯೇಕೆ ಕೊಳಲನೂದಿ 1 ಕರವ ನೀಡಿ ಮಣ್ಣಮೆದ್ದನೆಂದು ತಾಯ ಕಣ್ಗೆ ತೋರ್ದೆ ಜಗವನೆಲ್ಲ 2 ಪೊಂಗಲೀವೆ ಬಾ ಮುಕುಂದ ಹೊಂಗೊಳಲಾನಂದದಿಂದ ತಂಗುವೆ ನಾ ನಿನ್ನ ಪಾದದಿ ಮಾಂಗಿರೀಶ ಮುದ್ದುರಂಗ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಓಡಿಬಾ ಬಾ ರಂಗ ಆಡುಬಾ ನೀಲಾಂಗ ಪಾಡಿ ಪೊಗಳುವೆ ರಂಗ ಶ್ರೀಪಾಂಡುರಂಗ ಪ ಬೇಡುವೆನೊ ಮಾರಾಂಗ ನೋಡಿನಲಿವೆನೊರಂಗ ನೀಡು ವರಂಗಳ ರಂಗ ಶ್ರೀಕರಾಂಗ ಅ.ಪ ಬಡ ಮೌನಿಗಳು ನಿನ್ನ ಪಿಡಿಯ ಬಂದಿಹರೆನ್ನ ತೊಡೆಯ ಮೇಲಿರೋ ಚಿನ್ನ ಮುದ್ದುಮೋಹನ್ನ ಬೆಡಗ ತೋರುತೆ ಚೆನ್ನ ಚೆಲುವ ಬಾ ರನ್ನ ಒಡೆಯ ಮಾಂಗಿರಿಯ ಚೆನ್ನಿಗ ನಂಬಿಹೆನೊ ನಿನ್ನ 1
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಓಡಿಬಾರೊ ರಂಗನಾಥ ಪ್ರಿಯಾ ಪ ನೋಡೀ ಕೂಡೀ ಆಡೀ ಪಾಡುವೆ ಅ.ಪ ಮಾಡಬಾರದೆಲ್ಲ ಮಾಡಿ ಬಂದೆ ಬಂದೆ [ಓಡಿಬಂದು] ನಿಂದೆ ಕಂದಾ ತಂದೆಯೆ 1 ಏತಕೆನ್ನ ಮೇಲೆ ಇಷ್ಟು ಕೋಪ ಕೋಪಾ [ಆರ್ತರ] ಪಾಲಿಸ ಭೂಪಾ ಶ್ರೀಶನೆ2 ಗುರುವು ತುಲಸಿರಾಮ ದಾಸಪ್ರೇಮಾ ಪ್ರೇಮಾ [ವರ] ಕಾಮೀ ನಾಮ ಶ್ಯಾಮನೆ 3
--------------
ಚನ್ನಪಟ್ಟಣದ ಅಹೋಬಲದಾಸರು
ಓಡಿಬಾರೋ ಶ್ರೀ ಮನ್ಮಥ ಜನಕನೆ ನೀಡುವೆ ತನುಮನವಾ ಪ. ನೋಡಿ ಮುದ್ದಾಡಿ ಕೊಂಡಾಡಿ ನಾ ಬೇಡುವೆಈಡಿಲ್ಲದ ನಿನ್ನೊಡನಾಡುವ ಸುಖ ಅ.ಪ. ಕಾಡಿನ ಸುಖಕೆ ಮತ್ತೀಡಿಲ್ಲ ಧರೆಯೊಳುಮಾಡುವೆ ಶಪಥವನುಹಾಡಿಪಾಡಿ ಕೈಜೋಡಿಸಿ ಕುಣಿಯುತಮಾಡಿದೆವೊ ನಾವ್ ರಾಸಕ್ರೀಡೆಯ 1 ನಿರಂಜನ ಮೂರ್ತೆ 2 ನೀರಜನಾಭನೆ ತೋರೋಕರಪಲ್ಲವಮೀರಿವೆ ಹೃದಯ ಸಂತಾಪಗಳುಮಾರ ಮೋಹನ ಸಾರುವೆ ನಿನ್ನಯಜಾರ ಬುದ್ಧಿಯ ತಾಪವ ನೀಗಿಸು 3 ಕಮಲ ವಿಹಂಗಮರಾಜ 4 ನೀನೇ ದಯಾಪರ ನೀನೇ ಭಕ್ತೋದ್ಧಾರನೀನೇ ಗತಿ ಪರನಾರೆರಿಗೆಪಾಣಿಮುಗೆವೆಯಮ್ಮ ವಾಣಿಯ ಲಾಲಿಸಿ ವೇಣುನಾದ ತೋರೊ ತಂದೆ ಶ್ರೀನೃಹರೇ 5
--------------
ತಂದೆ ಶ್ರೀನರಹರಿ
ಮಾಡಿ ನೀವು ಸತ್ಸಂಗ ನೋಡಿ ಘನ ಅಂತರಂಗ ಧ್ರುವ ಸಾರಿದೂರಲಿಕ್ಕೆ ವೇದ ಅರರಿವದೆನಗಗಾಧ ದಾರಿದೋರಿಕುಡು ಬೋಧ ಗುರುಪ್ರಸಾದ 1 ಬದಿಲಿರಲಿಕ್ಕೆ ಖೂನ ಇದಕ್ಯಾಕುದ್ದರಿ ಜ್ಞಾನ ಛೇದಿಸಿ ಅನುಮಾನ ಭೇದಿಸಿರೊ ಪೂರ್ಣ 2 ಹಿಡಿಯಲಿಕ್ಕೆ ಸತ್ಸಂಗ ಓಡಿಬಾವ್ಹಾ ಶ್ರೀರಂಗ ಮಾಡಿ ಭವಭಯಭಂಗ ನೋಡುವ ಕೃಪಾಂಗ3 ಎಲ್ಲಕ್ಕೆ ಶಿಖಾಮಣಿ ಸುಲಭ ಈ ಸಾಧನಿ ಸೊಲ್ಲಿಗೆ ಮುಟ್ಟಿದ ಪ್ರಾಣಿ ಬಲ್ಲವ ಸುಜ್ಞಾನಿ 4 ಪಿಡಿದು ಸತ್ಸಂಗತಿ ಕಡಿದು ಹೋಯಿತು ಭ್ರಾಂತಿ ಪಡೆದ ಸುಖ ವಿಶ್ರಾಂತಿ ಮೂಢ ಮಹಿಪತಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು