ಎಂಥಾ ಮೋಹನನೇ ನೋಡಮ್ಮಯ್ಯಾ|
ಸಂತತ ತೃಪ್ತನು ಬಾಲಕನಾದಾ|ಅ-
ನಂತ ಚರಿತೆಯಾ ದೋರುವ ಕೃಷ್ಣ ಪ
ಮೂಡಣ ದೇಶಕೆ ಪಡರಲು ಗೋಪಿಯು|
ತಡೆಯದೆ ದುಮುಧುಮು ಧುಮುಕೆನುತ|
ಕಡೆಯಲು ಧುಡು ಧುಡು ಧುಡುನಡೆಯುತ ಬಂದು|
ಪಿಡಿದೆನ್ನ ಸೆರಗ ಬೆಣ್ಣೆ ಬೇಡುವಾ ಕೃಷ್ಣ 1
ಸಮಗೆಳೆಯರ ಸಂಗಡ ಧ್ವನಿವೇಣಿಯ|
ಉಮಟೆಸುತಲಿ ಧಿಗಿಧಿಗಿಲೆನುತಾ|
ಧಿಮಿಕಿಟ ಧಿರಕಿಟ ತಿರುಕಿಟವೆಂಬೋ|
ಕ್ರಮದಿ ವಾದ್ಯವ ಬಾರಿಸುವಾ ಕೃಷ್ಣ 2
ಗುರು ಮಹೀಪತಿ ಪ್ರಭುವಿನ ಪದರಜ|
ದೊರಕದು ಅಜಭವ ಮುಖ್ಯರಿಗೆ!
ಹರುಷದಿ ತೋಳ್‍ದೊಡೆ ಮೇಲೆ ಓಡಾಡುವಾ|
ಧರೆಯೊಳು ಯಶೋಧೆ ಸುಕೃತವೆಂತೋ3