ಸರಸಿಜಾಸನ ಮೊದಲು ಸ್ತಂಭ ಪರ್ಯಂತವು
ಚರಚರಾತ್ಮಕ ಜಗವು ಎಲ್ಲವು ಪ
ಪರತರನಾದ ಯಾವಾತನಾಧೀನವೋ ಆ
ಹರಿಯೇ ಬಲವು ನಿನಗೆ ಎನಗೆ ಮತ್ತೆಲ್ಲರಿಗೆ ಅ.ಪ.
ಕಾಲ ಉರುಕ್ರತು
ಭಾಸುರತೇಜ ಓಜಸು ಸತ್ವನೊ ಬಲು ಶಕ್ತನೊ
ಸರ್ವಜಗತ್ಸøಷ್ಟಿ ಸ್ಥಿತಿ ಲಯಕಾರನೊ
ಆ ಸರ್ವೇಶÀನ ಬಿಟ್ಟು ಬಲವಾವುದಿನ್ನಯ್ಯಾ 1
ಆರು ವರ್ಗಗಳೆಂಬ ವೈರಿಗಳ್ ಕಳ್ಳರಂತೆ
ಸೇರಿಕೊಂಡಿಹರು ಶರೀರದೊಳು
ಗಾರು ಮಾಡುವರವರಗಲ್ಲದೆ ಧರೆಯಲ್ಲಿ
ಭೂರಿ ಜಯಿಸಿದೆನೆಂಬ ಗರ್ವ ಸಲ್ಲುವುದೇನೊ 2
ನಿನ್ನ ಆಸುರೀಭಾವ ಇನ್ನಾದರೂ ಬಿಟ್ಟು
ಘನ್ನಮಹಿಮ ಕರಿಗಿರೀಶನೊಳ್ ಮನವ |
ಚೆನ್ನಾಗಿ ಕಲಿಸಿ ನೀ ಸಮಚಿತ್ತನಾದೊಡೆ
ಇನ್ನು ನಿನಗೆ ವೈರಿಗಳು ಯಾರು ಇಹರಯ್ಯಾ 3