ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂತಹುದೊ ನಿನ್ನ ಭಕುತಿ ? |ಸಂತತ ನಿನ್ನ ದಾಸರ ಸಂಗವಿರದೆನಗೆ ಪ.ವೃಣವನಾಶಿಪ ಕುರುಡು ನೊಣ ಮೊಸರ ಕಂಡಂತೆ |ಧನಿಕರ ಮನೆಗೆ ಕ್ಷಣಕ್ಷಣಕ್ಕೆ ಪೋಗಿ ||ತನುಬಾಗಿ ತುಟಿಯೊಣಗಿ ಅಣಕನುಡಿ ಕೇಳ್ವ - ಕೃ - |ಪಣ ಮನಕೆ ಎಂತಹದು ನಿನ್ನಯ ಭಕುತಿ 1ಅಡಿಯಾಡಿ ಮುಖಬಾಡಿ ನುಡಿಯಡಗಿ ಬಡವನೆಂದು |ಒಡಲ ತೋರಿಸಿದೆನೊ ಕಡುದೈನ್ಯದಿ ||ಒಡೆಯ ನೀನಹುದೆಂದು ಮಡದಿ - ಮಕ್ಕಳಿಗೆ ಹೆಸ - |ರಿಡುವ ಅವರಡಿಗೆ ಎರಗುವನ ಮನಕೆ 2ಹೋಗಿಬಾರೈ ಎಂದು ಅತಿಗಳೆದರು ತಲೆ - |ಬಾಗಿ ನಿಂತು ಅಲ್ಲಿ ಮೌನವಾಗಿ ||ಓಗರತೆ ಮನೆಮನೆ ತಪ್ಪದೆ ತಿರುಗುವ |ಜೋಗಿಯ ಕೈಯಕೋಡಗದಂಥ ಮನಕೆ 3ಅವನ ತೋರಿ ಬೆಟಿಕಿರಿಯ ಬಾಲವ ಬೀಸಿ |ಕುನ್ನಿ ಸುಳಿದಾಡಿ ಕಾಲ್ಗೆರಗುವ ತರದಿ ||ಹೆಣ್ಣಿನಾಶೆಗೆ ಬಾಯಬಿಡುವ ಸ್ತ್ರೈಣನಪರಿ - |ಘನ್ನವಯ್ಯ ಘನ್ನವಯ್ಯ ಬನ್ನಬಡುವ ಕುನ್ನಿಮನಕೆ 4ವಟುವಾಗಿ ಬಲಿಯ ದಾನವನು ಬೇಡಹೋದ |ಕಟು ಕಷ್ಟಗಳನೆಲ್ಲ ನೀನೆ ಬಲ್ಲೆ ||ವಟಪತ್ರಶಾಯಿ ಶ್ರೀಫಣಿ ವರದಪುರಂದರ - |ವಿಠಲ ನಿನ್ನ ದಾಸರ ಸಂಗಸುಖವಿರದೆ 5
--------------
ಪುರಂದರದಾಸರು