ಗರುತ್ಮಂತ - ಗರುತ್ಮಂತ ಪ
ಸೂತ್ರಾಭಿಧನಿಗೆ | ಪುತ್ರನೆಂದೆನಿಸಿದಅ.ಪ.
ಅಮೃತಕಲಶಾಮೃತ | ಹಸ್ತವು ನಿನ್ನದುಕೃತಕೃತ್ಯನ ಗೈ | ಸುತ ಕಶ್ಯಪಗೇ 1
ಹರಿಪದ ಯುಗ್ಮವ | ಕರದಲಿ ಧರಿಸಿರೆವರ ತವ ನಖದಲಿ | ಹರಿ ಬಿಂಬೋದ್ಛವ2
ಓಂಕಾರಾಭಿಧ | ಏಕಾತ್ಮನ ವಹನೀ ಕಾಯ್ವುದು ಎನ | ಓಕರಿಸದಲೆ 3
ಪನ್ನಗ | ನಗಧೀಶಾಖ್ಯಗೆಬಗೆ ಬಗೆ ಸೇವೆಯ | ಲಕುಮಿಗೆ ಗೈವೆ 4
ವೇದೋದಿತ ಕ್ರಿಯ | ಕಾದ್ಯಭಿಮಾನಿಯೆಪಾದ ಭಜಕ ಗುರು | ಗೋವಿಂದ ವಿಠಲನ 5