ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಓಂ ನಮೋ ನಾರಾಯಣಾಯ ತೇ ನಮೋ ನಮೋ ನಮೋ ಪ ಓಂ ನಮೋ ಓಂಕಾರಾದಿ ನೀ ಘನ್ನ ಮಹಿಮ ಅಷ್ಟಾಕ್ಷರಾತ್ಮಕನೆ ಅ.ಪ ಪ್ರಣವ ಪ್ರತಿಪಾದ್ಯ ನೀ ಅಷ್ಟಾಕ್ಷರದೊಳು ವಿಶ್ವತÉೈಜಸ ಪ್ರಾಜ್ಞ ತುರ್ಯಾತ್ಮ ಅಂತರಾತ್ಮ ಪರಮಾತ್ಮ e್ಞÁನಾತ್ಮ ವರ್ಣಾತ್ಮಕ ನೀ ಓಂಕಾರದೊಳು ಅಉ ಮನಾದಬಿಂದು ಘೋಷ ಶಾಂತ ಅತಿಶಾಂತದೊಳು ಪ್ರತಿಪಾದ್ಯಮೂರುತಿ ಹರೆ1 ಪ್ರಣವದೊಳು ಆದಿವರ್ಣದಿಂದಭಿವ್ಮಕ್ತಿ ಕಾಲಗಳ್‍ವ್ಯಕ್ತವೊ ಪ್ರಾಣ ಲಕುಮಿಯಭಿಮಾನಿಗಳನಂತ ವೇದಗಳಿಂ ವಿಶ್ವಮೂರುತೀ ಹರೆ2 ವಯ್ಯ ಕವರ್ಗ ವರ್ಗವೈದು ಪಂಚಭೂತಗಳಂ ವರ್ಣದೊಳಭಿಮಾನಿಗಳ್ ಭೂತಕ ಗಣಪ ಪ್ರಹವವಾಯು ತೈಜಸ ಮೂರುತೇ3 ಪ್ರತಿಪಾದ್ಯನೆ ಮಕಾರ ವಾಚ್ಯ ಶ್ರೀ ಪ್ರಾಜ್ಞ ನಿನ್ನಿಂದಭಿ- ವ್ಯಕ್ತಿ ಚವರ್ಗ ಪಂಚಕ e್ಞÁನೇಂದ್ರಿಯ ವೈದು ಸೂರ್ಯ ಪ್ರಾಣ ದಿಗ್ದೇ- ವತೆಗಳಿಹರು ಪ್ರತಿಗಾಣಿನೊ ಶ್ರೀ ಪ್ರಾಜ್ಞಮೂರುತಿ ಹರೆ4 ನಾದವಾಚ್ಯಪ್ರತಿಪಾದ್ಯ ತುರ್ಯನೆ ಅಭಿವ್ಯಕ್ತ ಪಂಚವರ್ಣ ಟವರ್ಗ ಕರ್ಮೇಂದ್ರಿಯಗಳ್ ಶ್ರೀ ತುರ್ಯ ಮೂರುತೆ 5 ಬಿಂದುವಾಚ್ಯ ಪ್ರತಿಪಾದ್ಯ ನೀನಾತ್ಮ ಬಿಂದುವಿಂದ ತವರ್ಗ ಪೊಂದಿಕೊಂಡಿಹುದು ತನ್ಮಾತ್ರಪಂಚಕ ಪಂಚವಾಯುಗಳಿಹರಯ್ಯ ಬಂಧ ಮೋಚಕ ನೀ ಕಾರಣ ಹರೆ 6 ಘೋಷದಿಂದಲಭಿವ್ಯಕ್ತಿ ಪಂಚಮನೋ ವೃತ್ತಿಗಳದರಭಿಮಾನಿ ಓಷಧೀಧರ ಖಗಪ ಶೇಷೇಂದ್ರ ಕಾಮರು ಪಕಾರ ಪಂಚವರ್ಣ ದೋಷರಹಿತ ಮನೋಧಾಮದಿ ನೀ ದೊರೆ 7 ಕಾರಾದಿ ಸಪ್ತವರ್ಣ ಸಪ್ತಧಾತುಗಳಲ್ಲಿ ಪರಿ ಅರಿಯೆನೊ ಹರಿಯೆ 8 ಅತಿ ಶಾಂತದೊಳು ಪ್ರತಿಪಾದ್ಯನಾಗಿಹೆ e್ಞÁನಾತ್ಮ ಹಕಾರಾದಿ ತ್ರೈವರ್ಣ ಅದರಿಂದ ಗುಣಕ್ರಿಯವೊ ತತುಕ್ರಿಯ ಜಾಗೃತ ಸ್ವಪ್ನ ಸುಷುಪ್ತಿ ವಿಶ್ವಾದಿರೂಪದಿಂದ ಉರಗಾದ್ರಿವಾಸವಿಠಲ ಮೂರುತೇ 9
--------------
ಉರಗಾದ್ರಿವಾಸವಿಠಲದಾಸರು