ಬೆಳುದಿಂಗಳಿನೊಳು ಬೇಟೆಯನಾಡಿರಿಬಲ್ಲವರಾದವರೆಲ್ಲಒಳ್ಳೊಳ್ಳೆಯವರು ಕೂಡಿ ಆಡಿರಿ ಶಮದಮ ಶಾಂತರು ಎಲ್ಲ ಪ
ತನ್ನ ಸರಿಯದ ಅವಿದ್ಯೆ ಹುಲಿಯದುಘುಡುರು ಘುಡುರು ಘುಡುರೆಂದೆನಲುಸುಮ್ಮನೆ ಪ್ರಣವದ ಧನುವನು ಎಳೆದು ನಾದ ಬಾಣದಿ ಬೀಳಿಸಿರಿ 1
ನಾನು ಎಂಬ ಕರಡಿಯು ಬಂದುಅಡರಲು ನಿಮ್ಮನು ನಿಲುವುದ್ಧಸ್ವಸ್ಥ ವಿವೇಕದ ಕೋಲಲಿ ಬಡಿಯಿರಿಕೆಡಹಿರಿ ನೋಡದೆ ನೀವೆಲ್ಲ2
ಅಪರೋಕ್ಷವೆಂಬ ಬಲೆಯನೆ ಒಡ್ಡಿದುರ್ಗುಣ ಮೃಗಗಳನೆ ಬಡಿದುಭವ ಹರ ಚಿದಾನಂದನ ನೆನೆಯುತಬೇಟೆಯನಾಡಿರಿ ಎಲ್ಲ 3