ದುಃಖವನೆಷ್ಟೆಂದು ಹೇಳಲಿ ಸಂಸಾರ ಶರಧಿಯಿದುದುಃಖದ ಶರಧಿಯಿಂದ ಪರಮಾತ್ಮನ ಸ್ಮರಣೆಗೆ ವಿಘ್ನವಹುದು ಪ
ಮಗ ಬುದ್ಧಿವಂತನಾಗಲಿಲ್ಲವೆಂದೆಂಬಮಗಳಿಗೊದಗಲಿಲ್ಲ ಅಳಿಯ ಎಂದೆಂಬಹಗರಣವಾಯಿತು ಮನೆಯೀಗ ಎಂದೆಂಬ ದುಃಖವೊಂದುಜಗಳಗಂಟಿಯು ಎನ್ನ ಹಿರಿಯ ಸೊಸೆ ಎಂದೆಂಬ ದುಃಖವೊಂದು1
ಹೆಂಡತಿ ವ್ಯಭಿಚಾರಿಯಾದಳು ಎಂದೆಂಬ ದುಃಖವೊಂದುಉಂಡೆನೆಂದರೆ ಅನ್ನವಿಲ್ಲ ಎಂದೆಂಬ ದುಃಖವೊಂದುಕಂಡಕಡೆಗೆ ಹೋಗೆ ಕೈ ಹತ್ತದೆಂದೆಂಬ ದುಃಖವೊಂದುಮುಂಡೆಯಾದಳು ಎನ್ನ ಮೊಮ್ಮಗಳು ಎಂದೆಂಬ ದುಃಖವೊಂದು 2
ನೆಂಟರಿಗೆ ಮಾಡಲೆನ್ನೊಳಿಲ್ಲವೆಂದೆಂಬ ದುಃಖವೊಂದುಒಂಟಿ ಬಯಲಿನ ಹೊಲವು ಬೆಳೆಯದು ಎಂದೆಂಬ ದುಃಖವೊಂದುಕಂಟಕಿ ನಾದಿನಿ ಹಡೆಯಲಾರಳು ಎಂದೆಂಬ ದುಃಖವೊಂದುಎಂಟು ವರಹ ಎಮ್ಮೆ ಸತ್ತಿತು ಎಂದೆಂಬ ದುಃಖವೊಂದು3
ಎದೆ ಮೇಲೆ ಕುಳಿತಿಹರು ದಾಯಾದಿಗಳೆಂದೆಂಬ ದುಃಖವೊಂದುಮುದುಕಿಗೆ ಗೆಲುವು ತಾನಿಲ್ಲವೆಂದೆಂಬ ದುಃಖವೊಂದು ಮದುವೆಗೆ ಹಾದಿಲ್ಲ ಹಾವಳಿ ಎಂದೆಂಬ ದುಃಖವೊಂದುಸದನ ಒಳ್ಳೇದಲ್ಲ ಏಳು ಮಕ್ಕಳ ತಾಯಿ ಎಂಬ ದುಃಖವೊಂದು 4
ಜೋಡಿಪೆ ಧೈರ್ಯವೆಂದರೆ ನಿಶ್ಚಯಾಗಲಿಕೆ ಕೊಡದು ಒಂದುನೋಡುವೆ ಚಿಂತಿಸಿ ಎನೆ ಚಿಂತೆ ಹರಿಯಲು ಕೊಡದು ಒಂದುಮಾಡುವೆ ಮಂತ್ರ ಪೂಜನ ಪೂಜೆ ಮಾಡಲು ಕೊಡದು ಒಂದುಕೊಡುವೆ ಗುರು ಚಿದಾನಂದನೆನೆ ಕೂಡಗೊಡದು ಎಂದು 5