(ಕಾಲಜ್ಞಾನ)
ಮೈಯ್ಯವ ಮರಿಯ ಬ್ಯಾಡಿರೋ |
ಮತ್ರ್ಯದೊಳಗ ಕಲಿರಾಯ ನರಸುತನ |
ಪ್ರಬಲ ವಾಯಿತು ಕೇಳಿರೋ ಪ
ಬೀಳು ಬಿದ್ದಾವೋ ಧರ್ಮದಾ ಭೂಮಿಯು |
ಅಧರ್ಮವೇ ಹೆಚ್ಚೀತು |
ಹೇಳಲಿನ್ನೇನವಗುಣಿಗಳು ಪ್ರಕಟಿಸಿ | ಕೇಡು ತಂದಾರು ಜಗಕೆ |
ಖೂಳರ ಹಿರಿತನವು ಒಳ್ಳೆವರಾ |ಮಾನ ಮನ್ನಣೆ ಹೋದಾವು |
ಮನೆಯ ಕೊಂಡುಂಬುವರು 1
ಮರ್ಯಾದೆಗಳ ಬಿಟ್ಟಾರೋ |
ಕುಲಕ ಮಾತವ ತಾಹರು |
ಹಗೆ ಹಾರೋ |
ಹುಸಿನುಡಿದು ಮನೆ ದೈವವನೇ ಮಾರಿ |
ಹದಗೆಟ್ಟು ಹೋಗುವರೋ 2
ಒಡಲು ಕಾಮಾಟಿಕೆಯಾ ಎರಡರಿಂದ |
ಕೋಣ-ನಂದದಿ ಬಗಿದು |
ಪಡಿ ಕೊಟ್ಟು ಸಲಹುವ ಒಡಿಯ ನೆಚ್ಚರ ವಿಲ್ಲಾ |
ಮರಹು ಕತ್ತಲೆ ಮುಸುಕಿ |
ಪೊಡವಿಲಿ ಭಕುತಿ ಮಾರ್ಗ ಮುಗ್ಗಿತು |
ಎಲ್ಯಾರಿದ್ದರ ಹೋಲಿಕೆಯು 3
ಕಡಲ ಶಯನನ ದಾಸನೆಂದರೆ ಬಾಗರು | ನೀಚರಿಗೆರಗುವರು
ಕನ್ಯರೈದು ವರುಷಕ ಗಂಡನ | ಸಂಗವ ಬಯಸುವರು |
ಇನ್ನೇನು ಏಳು ಬರುಷದ ಬಾಲೇರು |
ಗರ್ಭವ ಧರಿಸುವರು |
ಅಣ್ಣಾ ತಂಗಿಗೆ ಮದುವೆ ಮುಂದಕ |
ಆದಾವೋ ಜಗದೊಳಗ |
ಜಾತಿ ಸಂಕರ ವಾಹುದು 4
ಯಾತ್ರೆಯು ನಿಲ್ಲುವವು |
ನೀರು ತೋರವೆಲ್ಲಿ 5
ಶಾಸ್ತ್ರಗಳು ಮರೆವುದು |
ಸಾರಿದಾ ಬೋಧವಿದು6