ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನೆಲಿಗೆ ಬಾರದು ಗುರುವೇ ಮನವಿದು ಪ ಒಳ್ಳೆಯವರಾ ನಡೆ ಕಂಡು | ಎಳ್ಳನಿತು ನಾಚದು | ಖುಳ್ಳರ ಮನದಲ್ಲಿ ಬೆರೆಸುವದು 1 ಚರಟ ಮಾತುಗಳಲ್ಲಿ ಹರುಷವ ಬಡುವರು | ಪರಮ ಸದ್ಭೋಧದಲ್ಲಿ ತೊಳಗುವದು 2 ಏನ ಹೇಳಿದರೇನು ಜ್ಞಾನವ ಕೊಳ್ಳದು | ತಾನೆ ತನ್ನಿಚ್ಛೆಯಲಿ ತಿರುಗುವದು 3 ಸ್ಥಿರವಾಗುವ ಪರಿಯಲಿ ಕರುಣವ ಮಾಡುವುದು | ಸರಣೆ ಸರಪಳಿ ನಿಕ್ಕಿ ನಿಲಿಸುವುದು 4 ಸನ್ನುತ ಮಹಿಪತಿ ಚಿನ್ನನ ಹೊರೆವದು | ಧನ್ಯಗೈಸಲು ಮನವ ತಿದ್ದುವದು 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು