ಪಾಪಿಯ ನೋಡೆ ಬಡಿಸುವ ಪಾಪಿಯ ನೋಡೆಪಾಪಿಯ ನೋಡೆ ಪಾಪದ ಪಿಶಾಚಿಪಾಪಿಯ ಮೋರೆಯ ನೋಡಬಾರದಕ್ಕೆ ಪ
ಅನ್ನವನೀಗ ಇಷ್ಟಿಷ್ಟು ಹಾಕುವಳು ಅತ್ತಲಾಗಿ ಇಡುವಳುಏನು ಇಷ್ಟೆಂದು ಕೇಳಲು ಅರಿಯಿರಿ ಹೊಟ್ಟೆಯೆಂದು ಎದುರಿಗೆ ನಿಂತೆ ಮುಸಿ ಮುಸಿ ನಗುವಳು 1
ಆಜ್ಯವ ಹಾಕೆನೆ ಅಲ್ಲಾಡುತಲಿ ಅರಿಯಿರಿ ಬೇಸಗೆ ಸೆಖೆ ಎಂತೆಂಬಳುಮಜ್ಜಿಗೆ ಹಾಕೆನೆ ಮಂದಮತಿಗಳ ಮಹಾಶೈತ್ಯವು ಬೇಡವು ಎಂತೆಂಬಳು 2
ಉತ್ತಮರೆಂದರೆ ಒಳ್ಳೆಯದಿಕ್ಕಳು ಉಬ್ಬಿಸಹೋದರೆ ಉಬ್ಬದಿಹಳುನಿತ್ಯ ಚಿದಾನಂದ ಸತ್ಪುರುಷರಿಗೆ ನಿಶ್ಚಯವಾಗಿ ಉಣಬಡಿಸುವಳು 3