ಸಿರಿನಲ್ಲ ಮಧ್ವವಲ್ಲಭಪ.
ಕೊಲ್ಲದಿದ್ದರೆ ನಿಲ್ಲರವರು ಕಲಿಯುಗದ ಕಳ್ಳರುಅ.ಪ.
ಎಲ್ಲ ಕೂಡಿ ನಿನ್ನ ಪೂಜೆಗೆ ಕಲ್ಲು ಹಾಕುತಿದ್ದರುಬಲ್ಲೆನವರ ಕೊಳ್ಳೆಕಾರರ ಹಲ್ಲ ಕೀಳದೆ ನಿಲ್ಲರು1
ಒಳ್ಳೆಮಾತನಾಡಲವರು ಕೋಲಾಹಲದಿ ಬೈವರುಗೆಲುವ ಶಕ್ತಿ ಇಲ್ಲ ನಮಗೆ ಬಲ್ಲೆ ಮಧ್ವರಿಗೊಲಿದನೆ 2
ಕಳ್ಳತನವ ಒಲ್ಲೆವೆಂಬರು ಮುಳ್ಳು ಮೊನೆಯಂತಿಪ್ಪರುಚೆಲುವ ಹಯವದನ ಅವರ ಕೊಲ್ಲು ನಮ್ಮ ಗೆಲಿಸು 3