(ಇ) ಆತ್ಮನಿವೇದನೆಯ ಕೃತಿಗಳು
ಇದನಾದರು ಕೊಡದಿದ್ದರೆ ನಿನ್ನ
ಪದಸೇವೆಗೆ ಜನರೊದಗುವರೆ ಪ
ದೊರೆತನವಾಗಬೇಕೆನಲಿಲ್ಲ ಬಲು
ಸಿರಿತನವನು ವಾಂಛಿಸಲಿಲ್ಲ
ಪರಿಭೋಗದ ಸ್ಪøಹೆ ಎನಗಿಲ್ಲ ನಿನ್ನ
ಸ್ಮರಣೆಯೊಂದಿತ್ತರೆ ಸಾಕಲ್ಲ 1
ಅನ್ನವಸ್ತ್ರವ ಕೇಳುವದಿಲ್ಲ ಒಳ್ಳೆ
ಚಿನ್ನ ಬಣ್ಣವ ಕೊಡು ಎನಲಿಲ್ಲ
ಹೆಣ್ಣು ಮಣ್ಣಿನೊಳಗಾಸೆ ಎನಗಿಲ್ಲ ಪರಿ
ಪೂರ್ಣ ನೀನೊಲಿದರೆ ಸಾಕಲ್ಲ 2
ಸುರರ ಭೋಗದಿ ಮನವೆನಗಿಲ್ಲ ಪುಲಿ
ಗಿರಿದೊರೆ ಬಲ್ಲೆ ನೀನಿದನೆಲ್ಲ 3