ಶ್ರೀಮಾಧವ ತೀರ್ಥರ ಸ್ತೋತ್ರ
ಮಾಧವ ಸುತೀರ್ಥ ಗುರು | ಭಕ್ತಜನಕಲ್ಪತರುಆದಿ ಗುರುಗಳ ಕರಜ | ಮಾಡೆನ್ನ ವಿರಜ ಪ
ಸನ್ನುತ ಚರಣ | ಮೌನದಿಂ ಭಜನನೀ ಮಾಡಿ ಆನಂದ ವಾರಿಧೀಯಲಿ ಮಿಂದುಆ ಮಹಿಮೆ ಪೊಗಳಲೂ | ಎನಗಾವ ಅಳಲೂ 1
ಜ್ಞಾನಾಯು ರೂಪಕನೆ | ಪ್ರಾಣಪತಿ ಎನಿಪನ್ನನೀನಾಗಿ ತೋರುವಲಿ | ನಿನ್ನ ದಯವಿರಲಿ |ಮೌನೀಶ ಇದ ಹೊರತು | ಅನ್ಯಬೇಡೆನು ಒಳಿತುಪ್ರಾಣ ಮುಖ ತತ್ವೇಶ | ರೊಲಿಮೆ ಸಹ ಆಶ 2
ಆನಂದ ತೀರ್ಥ ಮತ | ಶಿಷ್ಟರಲಿ ಭೋಧಿಸುತದೀನಜನ ಪರಿಪಾಲ | ಹರಿಭಕ್ತ ಲೋಲಾ |ಜಾಣ ಗುರುಗೋವಿಂದ | ವಿಠಲ ಮಹಿಮಾನಂದನೀನಾಗಿ ಕೊಟ್ಟೆನ್ನ ಉದ್ಧರಿಸೊ ಘನ್ನ 3