ಕೆಟ್ಟಿತು ಕಾಲಗತಿಯು ದುರ್ಜನರಟ್ಟಳಿಯಲಿ ಜಗತಿ
ಹೊಟ್ಟು ಬೇವಂದದಿ ಬೇಯುತಲಿದೆ ವರ್ಮ ಬಿಟ್ಟು
ಕೆಡಿಸುವರು ಸಾದುಸಜ್ಜನರು ಪ
ಊರು ಕೇರಿ ಕೇರಿಗಳೊಳಗೆ ಒಳಿತುಣಲಾರು ಸೈರಿಸಹರು
ವಿಚಾರವನೆಣಿಸುತಹರು ದುರ್ಜನರು 1
ಒಳಗು ಹೊರಗು ಹುಳುಕನರಸುತ ಕಾಣದೆ ಕಳವಳಿಸಿ
ಮುದಿಗೂಬೆಯಂತಿಹರು 2
ಮನ ಮುನಿಸುಗಳಿಂದ ಸಜ್ಜನರನು ದನಿಗಳ ಮುಖದಿಂದ
ವಾಯುಸುತನ ಕೋಣೆಯಲಕ್ಷ್ಮೀರಮಣನೇ ಬಲ್ಲ 3