ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರು ಪೇಳಿದರೊ ಜೀವಾ ನಿನಗಾರು ಪೇಳಿದರೋ ಪ ಆರು ಪೇಳಿದರೋ ಈ ಸೋರುವ ಮನೆಯೊಳು ಇರುವುದು ಒಳಿತಲ್ಲಾ ತೆರಳುವುದುಚಿತನೇ ಅ.ಪ. ದುಷ್ಟರಿರುವರೋ ಈ ಗ್ರಹದೊಳು ಕಟ್ಟಿ ಸುಲಿಯುವರೋ ಇಟ್ಟಿದ್ದ ಅನ್ನದಿ ಕೆಟ್ಟ ಕ್ರಿಮಿಗಳುಂಟು ಮುಟ್ಟಿ ಬಳಸುವರಿಲ್ಲ ಹೊಟ್ಟೆ ತುಂಬಿದೋ ಅಲ್ಲಿ 1 ಛಾಯಾವೂ ಇಲ್ಲಾ ಈ ಮನೆಯೊಳು ದಾಯಾವೂ ಇಲ್ಲಾ ಬಾಯ ಬಿಡಿಸುವರೋ ಅನ್ಯಾಯ ಮಾಡುವರೋ ಉಪಾಯದಿಂದಲಿ ಬಿಟ್ಟು ಹಯವದನನ ಶೇರೋ 2 ತರುಣರಿರುವರೋ ಈ ಮನೆಯೊಳು ಮರುಳು ಮಾಡುವರೋ ಪರುಮ ಹರುಷ ನಮ್ಮ ಹನುಮೇಶ ವಿಠಲನ ನೆರೆ ನಂಬಿ ಸ್ಮರಿಸುವ ಸ್ಥಿರ ಪದವನು ಸೇರೊ 3
--------------
ಹನುಮೇಶವಿಠಲ
ಒಳಿತಲ್ಲ ನಿನ್ನ ತಳ್ಳಿ ಅಭಿಮಾನದೇವಿ ಎಲೆ ತಾಯೆ ನಮಿಸುವೆನು ದೂರಾಗೆ ಮಾಯಿ ಪ ಬಗೆಗೊಂಡು ಬ್ರಹ್ಮನ ತಲೆಯೊಂದು ಕಳೆದಿಟ್ಟು ಹೆಗಲೇರಿ ಶಿವನ ಸುಡುಗಾಡದಿಳಿಸಿದಿ ಜಗರಕ್ಷಕನನು ಹತ್ತು ಅವತಾರದೆಳಸಿದಿ ನಿಗಯಿಟ್ಟಂದ್ರನ ಮೈ ಛಿದ್ರ ಮಾಡಿಟ್ಟಿ 1 ಸೆರೆಹಿಡಿದು ತಾರಕನ ಆರೆದಿನದವನಿಂ ಕೊಂದಿ ಕರಪಿಡಿದು ಹಿರಣ್ಯನ ಅಸಮವರ ಸುಟ್ಟಿ ನೆರೆಯಾಗಿ ರಾವಣ ಆರುಕೋಟ್ಯಾಯುಷ್ಯ ಉರುತರದ ಸಿರಿಯೆಲ್ಲ ಮಾಯ ಮಾಡಿಟ್ಟಿ 2 ಸೆಳೆಕೊಂಡು ಕುರುಪನ ಕುಲನಾಶ ಮಾಡಿಟ್ಟಿ ಒಲಿದು ಕಲಿಯುವಗೆಲ್ಲ ನುಂಗಲ್ಹತ್ತಿರುವಿ ಸುಲಭದೆನ್ನನು ಬಿಟ್ಟು ಅಗಲದಿರ್ದರೆ ನಿನಗೆ ಜಲಜಾಕ್ಷ ಶ್ರೀರಾಮನೊನರುಹಂಘ್ರ್ಯಾಣೆ 3
--------------
ರಾಮದಾಸರು
ವಾಯುದೇವರು ಆನಂದ ಸಾಧನ ತಿಳಿ ಕಂಡ್ಯಾ ಮನವೆ ಪ ಶಕುತಿಯು ಇದ್ದಷ್ಟು ತಿಳಿದು ಮತವು ಬಲು ಯುಕುತಿಯಿಂದಲಿ ನೀ ಒಲಿಸು ಕಂಡ್ಯ ಭಕುತಿಯು ಗುರುಗಳ ಪದದಲಿ ಮಾಡಲು ಮುಕುತಿಯು ಕರವಶವಾಗುವದೊ ಸಿದ್ಧ 1 ತಿಳಿಯದಿದ್ದರೆ ನೀನು ತಿಳಿದವರ ಬಳಿಯಲ್ಲಿ ಮಿಳಿತನಾಗಿ ಪೋಗಿ ತಿಳಿದುಕೊಳ್ಳೊ ಖಳಜನ ಸಹವಾಸ ಕುಮತಗಳಭ್ಯಾಸ ಒಳಿತಲ್ಲವೊ ನಿನಗೆಂದಿಗನ್ನ 2 ಪ್ರವಚನ ಮಾಡುವ ಬುಧಜನ ಪೇಳುವ ಸುವಚನ ಕೇಳಿ ನೀ ಬದುಕು ಕಂಡ್ಯಾ ಭವ ಛಳಿ ಬಾಧಿಗೆ ಪ್ರವಚನ ಬಾಹೋದೆಂದಿಗನ್ನ3 ಇದ್ದವರಿಗೆ ಕೊಟ್ಟು ಅವರ ಹಿಂದೆ ಇಷ್ಟು ಮೆದ್ದರೆ ಕೋಟಿ ಭೋಜನದ ಪುಣ್ಯ ಗೆದ್ದರು ಇವರನ್ನ ನಂಬಿದ ಜನರು ಬಿದ್ದರು ದೂಷಕ ಜನ ತಮದಿ 4 ಕಾಸುವೀಸಕೆ ನೀನು ಮೋಸಗೊಳಲು ಬ್ಯಾಡ ತಾಸು ಘಳಿಗೆ ನೆಚ್ಚಲು ಬೇಡ ಏಸೇಸು ಸುಕೃತದಿ ದೊರಕಿತು ಈ ಮತ ವಾಸುದೇವವಿಠಲನ್ನ ಪಾಡೊ 5
--------------
ವ್ಯಾಸತತ್ವಜ್ಞದಾಸರು