ಏನೆಂದ್ಹೇಳಲಿ ಕಂಡದನುಭವನಾ ಅನುಭವನಾ
ಸ್ವಾನಂದ ಸುಖಸದೋದಿತ ಸುಸಾಧನ ಧ್ರುವ
ಘಮಿಘಮಿಸುವ ರವಿಕೋಟಿತೇಜನ
ಠವಿಠವಿಸುದ ಕಂಡೆ ದಿವ್ಯಸ್ವರೂಪನ
ಸವಿಸವಿ ಸುರುವ ಸುಖಸಂಬ್ರಹ್ಮನನು
ಸೇವಿಸುವದು ಕಂಡೆ ಶುಕಮುನಿಜನ 1
ಥಳಥಳಿಸುವ ತೇಜೋಮಯ ನಿಧಾನ
ಝಳಝಳಿಸುದು ಕಂಡೆ ಹೊಳೆವ ಪ್ರಕಾಶನ
ಒಳಹೊರಗೊಂದೇಪರಿ ಭಾಸುವ ಗುಣ
ಹೇಳಲಿನ್ನೇನದ ಸುಳವ್ಹು ಸೂಕ್ಷ್ಮನ 2
ಸಣ್ಣದೊಡ್ಡಾರೊಳಿಹ್ಯ ವಸ್ತುನಿರ್ಗುಣ
ಬಣ್ಣಬಣ್ಣದಿ ಕಂಡ ಗುರುಸ್ವರೂಪನ
ಕಣ್ಣಾರೆ ಕಂಡೆ ಸದ್ಗುರು ಚರಣ
ಧನ್ಯಧನ್ಯವಾಯಿತು ಮಹಿಪತಿ ಜೀವನ 3