ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆನಂದಾ ಅದ್ವೈತಾ ಬಲ್ಲವರಿಗೆ ನಿತ್ಯಾನಂದ ಪ ಆನಂದಾ ಅತಿ ಸಾಧುಗಳಲಿ ಸಹ ಜಾನಂದಾ ಸುಖಸಮಾಧಿಯಲಿ ಬೋ ಧಾನಂದಾ ಭಕ್ತ ವೃಂದದಲಿ ಆನಂದ ಸುಖಮಯ ಸರ್ವಭರಿತ ಸಚ್ಚಿ ದಾನಂದಾಮೃತ ರಸಪಾನದೊಳಿರುವ- ಅದ್ವೈತ 1 ಒಳಹೊರಗೊಂದಾಗಿರುವಾ ಹೊಳ ಹೊಳದ ಹಂಬಲಿಸದೆ ಮೆರೆವಾ ಥಳ ಥಳಿಸುವ ತನಿರಸಸುರಿವಾ ಅದ್ವೈತ 2 ಪರಮ ಪುರುಷರ ಸ್ತೋಮದಲಿ ಪರಾ ತ್ಪರ ತತ್ವ ವರವಿಚಾರದಲಿ ಹರಿ ಹರರಿಗೊಂದಿಸುವ ಹಾದಿಯಲಿ ಚರಿಸುತ್ತ ಚತುರ್ಥಮಂಟಪದ ಮದ್ಯದಲಿ ಇರುವಂಥಾ ಸದ್ಗುರು ಪರಶಿವಭರಿತ ವಿಮಲಾನಂದಾ ಅದೈತ 3
--------------
ಭಟಕಳ ಅಪ್ಪಯ್ಯ
ನೋಡುವೆ ನೋಟದಲಿ ನೋಡುವೆ ನೋಟದಲಿ ಪ ಗಂಗೆ ಯಮುನೆಗಳ ಸಂಗಮದೀ ಮಿಂದು ಅಂಗ ಸಂಗ ರಹಿತಾಂಗನದೇ ಮಂಗಳಾಂಗ ದಿವ್ಯಾಂಗಪೂಜೆಯ ಮಾಡಿ ರಂಗ ಮಂಟಪ ಪಾಂಡುರಂಗನಿಗೆ 1 ಈಡೆ ಪಿಂಗಳೆಗಳ ಜೋಡುಗೂಡಿ ಮೂಡು ರವಿಶಶಿ ಸೂಡಿ ಮಧ್ಯಿರುವಾಗ್ನಿ ಗೂಡಿನೋಳಾಡುವಜೀವನ ವಿಚಾರೋನ್ಮೂರ್ತಿಗೆ 2 ಹೃದಯದಿ ಬೆರಿತು ಹಂಸನ ಭರದಿ ತಿರುಗಿತಲೆರಡೊಂದೊಂಕಾರದಿ ಎರಕವಾಗಿ ಸಸ್ವರದಿ ಮನ ಪರಮ ಪುರುಷ ದಿವ್ಯಾಂಗನಿಗೆ 3 ಒಳಹೊರಗೊಂದಾಗಿ ದೇವಾ ಸುಲಭದಿ ಭಕ್ತರ ಸುಖವೀವಾ ಬೆಳಗುವ ನಲಿನಲಿದಾಡಿ4 ಆರು ಚಕ್ರಗಳ ಮೀರಿ ಮುಂದಣ ಸಣ್ಣ ದಾರಿಹಿಡಿದು ಹಿಂದಕೆ ನಡೆದು ತೋರುವ ಪರಿಪೂರ್ಣ ತಾರಕ ಬ್ರಹ್ಮನ ಸೇರಿ ನಿರ್ಬಯಲಾ ಚಿದ್ರೂಪಗೆ 5 ಅಂತರ್ಯಾಮಿ ಪೂರ್ಣಾಂತರದಿ ಮೂರ್ತಿ ಹೃದಯಾಂತರದಿ ಸಂತ ಸಾಧು ನಿಜ ಶಾಂತಿ ಪಾಲಿಪ ಗುರು ಚಿಂತೆರಹಿತ ನಿಶ್ಚಿಂತದಲಿ 6
--------------
ಶಾಂತಿಬಾಯಿ
ಮಾನವ ನೀನು ತಿಳಿ ಮಮಕುಲವ ಪೇಳುವೆನು ತಿಳಿದು ಭವದ ನೆಲೆ ಪ ಒಳಹೊರಗೊಂದಾಗಿ ನಳಿನಿನಾಭನ ಪ್ರೇಮ ಗಳಿಸುವ ಕುಲ ನಂದು ಅ.ಪ ಸೊಲ್ಲು ತಿಳಿಯುವಂಥ ಖುಲ್ಲ ಜನರ ಬಳಿ ನಿಲ್ಲದಂಥ ಬಲ್ಲಿದ ಕುಲ ನಂದು 1 ಹರಿಯ ಜರೆಯುವಂಥ ಪರಮ ದುರುಳರನೊದೆವಂಥ ಹರಿಹರಿಯೆಂದೆಂಬ ವರಸುಧೆಯಮೃತಭರಿತ ಪರಲೋಕದ ಅರಿವಿನ ಕುಲನಂದು 2 ತಾಮಸವನು ತ್ಯಜಿಸಿ ದಾಸರ ಪ್ರೇಮವನು ಬಯಸಿ ಭೂಮಿಯೊಳು ಶ್ರೀರಾಮರಹೀಮೆಂದು ನೇಮಿಸಿಕೊಂಡ ನಿಸ್ಸೀಮಕುಲವು ನಂದು 3
--------------
ರಾಮದಾಸರು