ಕಂಡೆನು ಕೌತುಕ ಮಂಡಲದೊಳಗೊಂದು ಹೊಯ್ಯಂದ
ಡಂಗುರವ ಮಂಡಿಯ ಮಸಿಯಲಖಂಡಿತವಾಗ್ಯದೆ ಧ್ರುವ
ಖೋಯೆಂದು ಕೂಗುತ ಕಾಯದೊಳಗದೆ
ಮಾಯದ ಮರೆಯಲುಪಾಯ ಮುಚ್ಚಿದ ನೋಡಿ 1
ಝೇಂ ಝೇಂ ಝೇಂ ಝೇಂ ಝೇಂಕರಿಸುತದೆ
ಕಂಜನಾಭನ ಕರುಣಾನಂದನೋಡಿರ್ಯೊ 2
ಘೇಳೆನಿಸುತದÀ ತಾಳಮೃದಂಗವು
ಒಳಹೊರಗಿದು ಧಿಮಿಗುಡುತದ 3
ಅನುಹಾತ ಧ್ವನಿಅನುಭವ ನೋಡಿರೋ
ಅನುದಿನ ಸಾಧಿಸಿ ಘನ ಬೆರದಾಡಿರೊ 4
ಆನಂದೊಬ್ರಹ್ಮದ ಆಟವಿದುನೋಡಿ
ಏನೆಂದ್ಹೇಳಲಿ ಸ್ವಾನುಭವದ ಸುಖ 5
ತುಂಬಿತುಳುಕುತದೆ ಅಂಬುಜಾಕ್ಷನ ಮಹಿಮೆ
ಕುಂಭಿನಿಯೊಳು ನಿಜ ಗಂಭಗುರುತ ನೋಡಿ 6
ಸಾಧಿಸಿ ನೋಡಿರೊ ಶ್ರೀ ಸದ್ಗುರು ಶ್ರೀಪಾದ
ಗಾದಿಯ ಮಾತಲ್ಲ ಭೇದಿಸಿ ನೋಡದು 7
ಶುಕಾದಿ ಮುನಿಗಳ ಸುಖಾಶ್ರಯವಿದು
ಏಕಾಕ್ಷರ ಬ್ರಹ್ಮ ಏಕೋಚಿತ್ತದಿ 8
ಮೊತ್ತರಾಗಿ ತನ್ನ ನೆತ್ತಿಯೊಳಗಿದೆ
ಉತ್ತಮರ ಸುತ್ತ ಮುತ್ತ ಸೂಸುತದ9
ಗುರು ಕೃಪೆಯಿಲ್ಲದೆ ಗುರುತವಾಗದಿದು
ಬರೆ ಮಾತಿನ ಮಾಲೆಗೆ ಸೆರಗ ಸಿಲುಕದಿದು 10
ಗುರುತವಿಟ್ಟು ಗುರುವಿನ ಮಹಿಮೆಯ
ತರಳ ಮಹಿಪತಿ ನಿನ್ನೊಳು ನೋಡೆಂದು 11