ಇಕ್ಕೊ ಇಲ್ಲೆ ನೋಡಿ ಸಿಕ್ಕುತ್ತದೆ ನಿಜಗೂಡಿ ಧ್ರುವ
ತಿಳಿಯಲು ತನ್ನ ಅಳುವುದು ಭಿನ್ನ
ಒಳಹೊರಗದೆ ಪ್ರಸನ್ನ
ಬೆಳಗು ಅಭಿನ್ನ ಹೊಳೆವದು
ಸುಳಹು ಸದ್ಗುರು ಪಾವನ್ನ 1
ತನ್ನೊಳು ತಿಳಿದವನೆ ತಾನುಳಿದ
ಉನ್ಮನಿವಸ್ತಿಯೊಳಳಿದಾ
ಮುನ್ನಿನ ಕರ್ಮವ ನಿಲ್ಲದೆದೊಳದಾ
ಚನ್ನಾಗವೆ ಭವಗಳೆದಾ 2
ಇದು ನಿಜ ಖೂನ ಸಾಧಿಸು ಙÁ್ಞನ
ಬುಧ ಜನರ ಸುಪ್ರಾಣ
ಭೇದಿಸು ಮಹಿಪತಿ ನಿನ್ನೊಳು ಪೂರ್ಣ
ಇದೇ ಸದ್ಗುರು ಕರುಣ3