ಸದ್ಗುರು ಭಕ್ತಿ ಲೇಸು ಲೇಸು
ಸದ್ಭಕ್ತಿಗೊಂದು ಗುರುಕೃಪೆಯೆ ಲೇಸು ಧ್ರುವ
ಒಂದೆ ಸುಪಥ ಲೇಸು
ಹೊಂದಿ ಬಾಳುವದು ಲೇಸು
ಪಾದ ಕಾಂಬುವದೆ ಲೇಸು 1
ನಡೆ ನುಡಿ ಒಂದೆ ಲೇಸು
ದೃಢಭಾವನೆಯು ಲೇಸು
ಪಿಡಿಯುವನು ಸಂಧಾನಧ್ಯಾತ್ಮದ ಲೇಸು 2
ಗುರುದೈವೆಂಬುದೆ ಲೇಸು
ಅರಿತು ಬೆರೆವುದು ಲೇಸು
ಸರಕ್ಕನೆ ಸಾಧಿಸಿಕೊಂಬಾನುಭವ ಲೇಸು 3
ಒಳಮುಖನಾಗುವದೆ ಲೇಸು
ತಿಳಿಯುವಾತನ ಮನ ಲೇಸು
ಬೆಳಗಿನೊಳಿಹ್ಯ ಬೆಳಗು ಹೊಳೆವ ಲೇಸು 4
ತನ್ನ ತಾ ತಿಳಿವದೆ ಲೇಸು
ಉನ್ಮನವಾಗುದೆ ಲೇಸು
ಪಾದ ನಂಬುದೆ ಲೇಸು 5
ಅರ್ತರೆ ಗುರುವಾಕ್ಯ ಲೇಸು
ಬೆರ್ತರೆ ಗುರುಪಾದ ಲೇಸು
ನಿರ್ತದಿಂದಾಗುವ ಪೂರ್ಣ ಗುರ್ತವೆ ಲೇಸು 6
ಗುರುಶರಣ್ಹೋಗುದೇ ಲೇಸು
ಕರುಣ ಪಡೆವದೆ ಲೇಸು
ತರಳ ಮಹಿಪತಿಗಿದೆ ಸುಖವೆ ಲೇಸು 7