ಸೂಳಿನ್ನ ಪೊಗುವವ ಏನಾದೆಂತಾ
ಹಾಳಾದಬಳಿಕ ಪುಣ್ಯ ಮೂಳನಾಯಾದ ಪ
ಮೂತ್ರದ್ವಾರಕೆ ಮೆಚ್ಚಿ ಮಾತಾಪಿತರ್ವೈರ್ಯಾಗಿ
ಪಾತ್ರಾಪಾತ್ರೆನದೆ ಕುಲಗೋತ್ರ ಧರ್ಮಳಿದ
ಮಾತೃ ಭೂಮಾತೆಯ ಯಾತ್ರ ಸುದ್ದರಿಯದೆ
ಧಾತ್ರಿಯೊಳ್ ಕೈಸೂತ್ರಗೊಂಬ್ಯಾದ1
ಸುಲಭದಿಂ ತನ್ನಯ ಕುಲನಾಶಗೆ ಅನ್ಯ
ಕುಲಕೆ ಹವಣಿಪ ಮಾರಿಬಲೆಗೆ ಒಳಪಟ್ಟು
ಕುಲ ವಿಧವಿಧ ಭಕ್ತಿಗಳನಗಲಿ
ಬಲುಪಾಪಕೊಳಗಾಗಂಕತನ ಮಹ ಕೊಲೆಗೆ ಈಡಾದ 2
ಉತ್ತಮರ ಲಕ್ಷಿಸದೆ ಸತ್ಯಕ್ಕೆ ಮನಗೊಡದೆ
ಮೃತ್ಯುರೂಪಿಣಿಮಾತೇ ಅತ್ಯಧಿಕವೆನುತ
ಮರ್ತು ತನ್ನಯ ಸುಖವ ತೊತ್ತಾಗಿ ಪಾತಕಿಗೆ
ನಿತ್ಯ ಮೈಲಿಗೆಹೊರುವ ಕತ್ತೆಯಂತಾದ 3
ಸಾರುತಿಹ್ಯವೇದ ಸುವಿಚಾರವಾದಗಳೆಲ್ಲ
ತೂರಿ ಅಡಿವಿಗೆ ಅಟ್ಟಿ ಮೀರಿ ಮಹವಾಕ್ಯ
ಘೋರನರಕಕೊಯ್ದು ಸೇರಿಸುವವತಾರಿ ಮಕ್ಕ
ಮಾರಿ ಜಾರೆಗೆ ಬಿಡದೆ ಸೆರೆಯಾಳು ಆದ 4
ಮನ ಅವಳಿಗರ್ಪಿಸಿ ತನು ಅವಳಿಗೊಪ್ಪಿಸಿ
ಧನವನಿತು ಅವಳ ಅಧೀನದಲ್ಲಿರಿಸಿ
ಬಿನುಗರೊಳುಬಿನುಗೆನಿಸಿ ಕುಣಿಕುಣಿದು ಕಡೆಗೆ ಮಮ
ಜನಕ ಶ್ರೀರಾಮನಡಿ ಕನಿಕರಕ್ಹೊರತಾದ 5