ಲಾವಣಿ ಪದ
ದೂರ್ ದೂರಲ್ಲ ಕೋಲ್‍ಕಾರ ಕೃಷ್ಣ ಕೇಳು ಬಾಲೆ
ದಾರಿಯೋಳ್ ಸುಂಕ ಶೋದಗಳುಂಟೂ ಇದು ಏನ್ ಗಂಟು 1
ಗಂಡನುಳ್ಳ ಬಾಲೆಯರ ದುಂಡಕುಚ ಮುಟ್ಟಲಿಕ್ಕೆ
ಪುಂಡತನ ಬುದ್ಧಿಯಿದು ಥರವೇನೋ ಜೀವಯರವೇನೋ
ಪುಂಡತನ ಬುದ್ದಿಯಿದು ಥರವೇನೆಂದರೆ
ಹೆಂಡತೆಂತ ಮುಟ್ಟಿದಾಗ ಕುಚಯುಗವಾ ಕಾಣದೆ ನಗುವ 2
ಕಾಕು ಮಾತಾಡುತಿದ್ದಿ
ಸಾಕು ನಿನ್ನ ಮಾತೀಗ ಸಲುಗೇನೆಂದರೆ
ಬೇಕು ಬೇಡಿದ್ದು ನಾ ಕೊಡುತೇನೆ ನಿನ್ನಿಡುತೇನೇ 3
ಕೊಂಡು ಕೊಂಡು ನಡೆಸಲಿಕ್ಕೆ ಶೆಟ್ಟಿಗಾರ ನಾನಲ್ಲ
ನೀನಿಟ್ಟುಕೊಂಡ ಸೂಳೆ ನಾನಲ್ಲ ಹೋಗೋ ನೀನಲ್ಲ ಸಾಗೋ
ಇಟ್ಟುಕೊಂಡ ಸೂಳೆ ನಾನಲ್ಲ ಹೋಗೆಂದರೆ
ಕಟ್ಟಿಕೊಂಡು ಹೋದೇನು ಒಳತನಕಾ ಬೆಳಬೆಳತನಕಾ 4
ಒಳತನಕ್ಯಾತಕೆ ಬೆಳತನಕ್ಯಾತಕೆ
ತಾಳಿಯರಿಲ್ಲಾ ಮಾತಿನ ಬೆಡಗಾ ಅಹುದೆಲೊ ಹುಡುಗ
ತಿಳಿಯದಿದ್ದರೆ ನಾ ತಿಳಿಯ ಹೇಳಿಕೊಡುವೆನೆಂದು
ಸೆಳೆದಪ್ಪಿಕೊಂಡ ಶ್ರೀದವಿಠಲ ಬಹುಬಹು ಧಿಟಲಾ5