ತಿಳಿಯದು ಆರಿಗೆ ನಳಿನಾಕ್ಷನ ಘನ
ವಿಲಸಿತಮಹಿಮೆ ಸುಲಭವಲ್ಲಮಮ ಪ
ಒಳಗು ತಾನೆ ಹೊರಗು ತಾನೆ
ಒಳಗ್ಹೊರಗೊಂದಾಗಿ ಬೆಳಗುವ ತಾನೆ
ಬಳಗ ತಾನೆ ಬಂಧು ತಾನೆ
ಹಲವು ಜೀವರ ಸಲೆರೂಪನು ತಾನೆ 1
ಹಸಿವು ತಾನೆ ತೃಷೆಯು ತಾನೆ
ಹಸಿತೃಷೆ ತೀರಿಪ ಸೂತ್ರನು ತಾನೆ
ಎಸೆವ ತತ್ವಮಸಿ ಮಹವಾಕ್ಯವ
ಕುಶಲದಿ ನುಡಿಸುವ ಈಶನು ತಾನೆ 2
ರಕ್ಷಕ ತಾನೆ ಶಿಕ್ಷಕ ತಾನೆ
ಸಾಕ್ಷಿಯಾಗಿ ನ್ಯಾಯ ವೀಕ್ಷಿಪ ತಾನೆ
ಸೂಕ್ಷ್ಮಜ್ಞಾನವಿತ್ತಕ್ಷಯದ್ಹೊರೆಯುವ
ಮೋಕ್ಷಕರ್ತ ಶ್ರೀರಾಮ ತಾನೆ 3