ಈ ದೇಹ ನಿನ್ನ ಒಳಗೊಂಡಿತೊ ಇಷ್ಟಾದ ಮೇಲೆ ಪ.
ದೇಹ್ಯ ಬಾಹ್ಯ ವ್ಯಾಪಾರವ ನೀ ಪರಿಹರಿಸಿದೇ ದೇವ ಅ.ಪ.
ದೇಹದೊಳಗಿದ್ದವರು ಬಾಹ್ಯ ವ್ಯಾಪಾರಕ್ಕೆಳೆಯೆ
ಈ ದೇಹ ಬಾಂಧವರು ಎಲ್ಲ ಎನ್ನ ದೇಹ ಕೀಳು ಮಾಡಿ ನೋಡೆ
ದಾಹ ಹತ್ತಿತೋ ನಿನ್ನಲ್ಲಿ ದೇಹ ಸಾರ್ಥಕವಾಗಲು 1
ರಂಗ ನಿನ್ನ ಸ್ತುತಿಮಾಡೆ ಹಂಗಿಸುವರೆಂದು ಇದ್ದೆ
ಹಂಗಿಸಿ ಭಂಗಿಸಿ ರಂಗಕ್ಕೆಳಸಿ ಎನ್ನ ನಿನ್ನ
ಅಂತರಂಗಕ್ಕೆ ಎಳೆತಂದೆ ಹರಿ
ರಂಗಾ ನಿನ್ನ ಸಿರಿಯಾರೋ ಮಂಗಳ ಮಹಿಮ 2
ಕಂತು ಜನಕನೆ ನಾ
ನೆಂದು ಸ್ತುತಿಸಲು ನಿನ್ನ ಅಂತರದಂತಿರಲಿ
ಪಂಥ ಬೇಡ ಎನ್ನ ಮೇಲೆ ಇಂತು ಕೃಪೆ ತೋರಿಸುತ ನಿಂತು
ಅಂತರಂಗಕೆ ಬಾ ಲಕ್ಷ್ಮೀಕಾಂತ ಶ್ರೀ ಶ್ರೀನಿವಾಸ 3