ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವ ರೀತಿಯಿಂದ ನೀಯೆನ್ನ ಪಾಲಿಸೊಶ್ರೀವಿಭು ಹಯವದನ ಪ. ಈ ವಿಧ ಭವದೊಳು ಇಷ್ಟು ಬವಣೆಪಟ್ಟೆತಾವರೆದಳನಯನ ಹಯವದನಅ.ಪ. ಕಾಮನ ಬಾಧೆಯ ತಡೆಯಲಾರದೆ ಕಂಡಕಾಮಿನಿಯರನೆ ಕೂಡಿನೇಮನಿಷ್ಠೆಯಿಂದ ನಿನ್ನನು ಭಜಿಸದೆಪಾಮರನಾದೆನೊ ಹಯವದನ 1 ಅಂಗನೆಯರಲ್ಲಿ ಅಧಿಕ ಮೋಹದಿಂದಶೃಂಗಾರಗಳನೆ ಮಾಡಿಮಂಗಳಾಂಗನೆ ನಿನ್ನ ಮಹಿಮೆಯ ಪೊಗಳದೆಭಂಗಕ್ಕೆ ಒಳಗಾದೆನೊ ಹಯವದನ 2 ಹೀನ ಸಂಗವನೆಲ್ಲ ಹಯಮುಖದೇ-ವನೆ ವರ್ಜಿಸುವಂತೆ ಮಾಡೊಜ್ಞಾನಿಗಳರಸನೆ ದಯವಿಟ್ಟು ನಿನ್ನನುಧ್ಯಾನಿಸುವಂತೆ ಮಾಡೊ ಹಯವದನ 3
--------------
ವಾದಿರಾಜ
ಕಡೆಗಣ್ಣಲಿ ನೀ ನೋಡದಿರೆನ್ನಯ್ಯ ಬಿಡಬೇಡವೊ ಕೈಯ್ಯ ಬಡವರ ಬಂಧು ಬಹುಕೃಪಾಸಿಂಧು ಒಡೆಯ ನೀನಲ್ಲದೆ ಎನಗೆ ಬ್ಯಾರಿಲ್ಲವೊ ಪ. ಶತ ಅಪರಾಧವ ಮಾಡಿದೆನಯ್ಯ ಸೇರಿದೆ ನಾ ನಿನ್ನ ಬೆನ್ನ ಅತಿಪಾತಕಿ ಅಜಾಮಿಳನ ಉದ್ಧರಿಸಿದೆ ಪೃಥಿವಿಯೊಳಗೆ ಬಿರುದಾಂತ ಶ್ರೀಕಾಂತ 1 ನೆಲೆಗಾಣದೆ ನಾನಾಪರಿ ಚಿಂತೆಗೆ ಒಳಗಾದೆನೊ ನಾಹೀಗೆ ಬಳಲಿಸಬ್ಯಾಡವೊ ಭಕ್ತಕುಟುಂಬಿ ನಳಿನದಳಾಂಬಕ ನೀ ಸಲಹೆನ್ನನು 2 ಹೇರೊಪ್ಪಿಸಿದ ಮೇಲ್ಯಾತರ ಸುಂಕವು ಕಾರುಣ್ಯನಿಧಿ ಹೆಳವನಕಟ್ಟೆ ರಂಗಯ್ಯ 3
--------------
ಹೆಳವನಕಟ್ಟೆ ಗಿರಿಯಮ್ಮ
ಕುಟಿಲವನು ಕಳಿಯೋ ನಿಟಿಲ ನಯನಾ ಪ ದುರ್ವಿಷಯ ಲಂಪಟದಿ ಮುಳಿಗಿ ಘನ ಸಂಕಟಕೆ ಒಳಗಾದೆನೊ ಪ್ರಭುವೇ ಅ.ಪ. ಪಂಚಭೇದ ಜ್ಞಾನವನು ಪಂಚವಿಧ ತೋರೆಂದು ಬಿನ್ನೈಪೆ ಮಂಚಪದಯೋಗ್ಯಾ ವೈರಾಗ್ಯ 1 ಕಾಮಿನಿಯಳಾ ಇಟಕೊಂಡು ಅನ್ಯಳ ಕಾಮಿಸುವುದುಚಿತವೇ ರಾಯಾ ಕಾಮರೂಪದಿಂದೆನ್ನ ಕಡೆಗೆತ್ತಿ ಕಾಯದಿರೆ ಕಾಮಹರನೆಂಬ ಬಿರುದ್ಯಾತಕೊಕಾಮಪಿತನೇ ಕೇಳು ಕಾಲಕಾಲಕೆ ನಿನ್ನ ಕಾಲಿಗೆರಗುವಂತೆ ಮಾಡಿ 2 ಬಿಲ್ವಭಜಕನೆ ಕೇಳು ಮತ್ತೊಂದು ನಾನೊಲ್ಲೆಶಪಥ ಪೂರ್ವಕ ಪೇಳ್ವೆ ಮಿಥ್ಯಮತವೊಲ್ಲೆನೊಒಲ್ಲದ ಸುರನಿಗೆ ಚೆಲ್ವಿಯಾಗಿತ್ತು ಕಂಗೆಡಿಸಿ ಉಳಿಸಿದೆ ಬಿಲ್ಲುಗಾರನೆ ಮಗನ ಕಾಳಗದಿ ಕೆಡಹಿ ತಂದೆ-ವರದಗೋಪಾಲವಿಠಲನ ನೋಡಿ ತೋರಿದೇ 3
--------------
ತಂದೆವರದಗೋಪಾಲವಿಠಲರು