ಎಚ್ಚತ್ತು ಇರು ಕಂಡ್ಯ ಮನವೇ | ನಮ್ಮ |
ಅಚ್ಯುತನಂಘ್ರಿಗಳನು ನೆನೆ ಕಂಡ್ಯ ಮನವೆ ಪ
ಆಡದಿರಪವಾದಗಳನು ಕೊಂ |
ಡಾಡದಿರಿನ್ನು ಚಿಲ್ಲರೆ ದೈವತಗಳನು ||
ಬೇಡದಿರು ಭಯ ಸೌಖ್ಯವನು ನೀ |
ಮಾಡದಿರಿನ್ನು ದುರ್ಜನ ಸೇವೆಯನು || ಸಜ್ಜನ ದ್ವೇಷವನು1
ನರಜನ್ಮ ಬರುವದೆ ಕಷ್ಟ ಇದ- |
ನರಿದು ನೋಡು ವಿಪ್ರಾದಿ ಶ್ರೇಷ್ಠ ||
ಮರಳಿಬಾಹುದು ಉತೃಷ್ಟ |
ಕೇಳೆಲವೊ ಮರ್ಕಟ 2
ಹಾಳು ಹರಟೆಗೆ ಹೋಗಬೇಡ ನೀ ಕಂಡ |
ಕೂಳನು ತಿಂದು ಒಡಲ್ಹೊರಿಯಬೇಡ ||
ಕಾಲ ವ್ಯರ್ಥ ಕಳಿಯ ಬೇಡ ನಮ್ಮ |
ಶ್ರೀ ಹರಿಯ ದಯಮಾಡ 3
ಅನ್ಯ ಸ್ತ್ರೀಯರ ನೋಡ ಬೇಡಾ ಹಿಂದೆ |
ಮಣ್ಣುಕೂಡಿದವರ ನೀ ನೋಡಾ ||
ಅನ್ಯ ಶಾಸ್ತ್ರವನೋದಬೇಡಾ ನಮ್ಮ |
ಬೋಧ ಮೈ ಮರೆತಿರಬೇಡಾ 4
ಗೋ ವಿಪ್ರರ ಸೇವೆ ಮಾಡು ಸೋಹಂ |
ಭಾವಗಳನು ಬಿಟ್ಟು ದಾಸತ್ವ ಕೊಡು ||
ಕೇವಲ ವೈರಾಗ್ಯ ಮಾಡು ವಿಜಯ ||
ಲಜ್ಜೆಯ ಈಡ್ಯಾಡೊ5
ನಾನು ಎಂಬುದು ಬಿಡು ಕಂಡ್ಯ ಎನ್ನ |
ಮಾನಾಪಮಾನಕ್ಕೆ ಹರಿಯೆನ್ನು ಕಂಡ್ಯ ||
ಜ್ಞಾನಿಗಳ ಒಳಗಾಡು ಕಂಡ್ಯ ವಿಷಯ |
ಬೀಳುವಿ ಯಮಗೊಂಡಾ 6
ಕಷ್ಟ ಪಡದೆ ಸುಖಬರದು ಕಂ- |
ಗೆಟ್ಟ ಮೇಲಿನ್ನು ಕಷ್ಟ ತಿಳಿಯೋದು ||
ದುಷ್ಟ ವಿಷಯ ಆಶೆ ಜರಿದು ವಿಜಯ- |
ಕೂಗೆಲವೊ ಬಾಯಿ ತೆರೆದು 7