ನಿತ್ಯ ಪರಿಪೂರ್ಣ ಕಾಮ ಪಟ್ಟಾಭಿರಾಮ
ತನ್ನ ಸ್ಮರಿಸುವ ಜನಕೀವನು ಕ್ಷೇಮ ಪ
ಭಾಸ್ಕರವಂಶ ಭೂಷಣ
ತರಣಿಜಮಿತ್ರ ಭವ್ಯ ಚರಿತ್ರ | ದಾಶರಥಿ
ಕರುಣಾಳು ಸರೋಜನೇತ್ರ ಅ.ಪ
ಜಡಮತಿಯಾದರೂ ಇವನ | ಮರೆಯಾ ಇನ್ನು
ಧೃಢಮತಿಗೆ ತನ್ನನೇ ಕೊಡುವೆನೈಯ್ಯಾ 1
ತಮ್ಮೋಳು ತಾವು ತಿಳಿದು | ಭಜಿಸುವರು ಇನ್ನು
ಹೆಮ್ಮೆಯ ಮಾತುಗಳು ಬಿಡಿರಿ ಜನರು 2
ರಾಮನು ನರನೆಂಬ ಪಾಮರನ ಬಾಯಲಿ ಮಣ್ಣು
ಸೋಮಶೇಖರ ತನ್ನ ಸತಿಗೆ | ಪೇಳಿದ ಇವನ
ನಾಮದ ಮಹಿಮೆ ಕುಣಿಕುಣಿದು 3
ನಿರುತಾ ಪೊಗಳುವವಿವನ ವೇದ | ಇವನಾ
ಚರಣೆ ಸಜ್ಜನರಿಗೆ ಬಲುಸ್ವಾದ 4
ಸೇತುವೆ ಕಟ್ಟುವುದುಂಟೆ ಕೋತಿದಂಡುಗಳೆಲ್ಲಾ
ವ್ರಾತ ರಹಸ್ಯವೇತಕೆ ಚಿಂತೆ 5
ಹೊರಗಿನ ಕಣ್ಣಿಂದ ಅರಿಯಲು ಸಾಧ್ಯವಲ್ಲಾ
ನೆರೆ ಒಳಗಣ್ಣಲಿ ನೋಡಬೇಕು | ಸ
ದ್ಗುರು ಕಟಾಕ್ಷವಾದವಗೆ ಜೋಕು 6
ಪ್ರತ್ಯಕ್ಷವಾದಿಗಳಿಗೆ ಮೃತ್ಯುವಿನ ಬಾಯೊಳು
ಸತ್ತು ಹುಟ್ಟುವುದು ತಪ್ಪುವುದಿಲ್ಲಾ | ಆ
ಪತ್ತು ಇದೇ ದುರ್ಜನಿರಿಗೆಲ್ಲಾ 7
ಮಗನು ಬ್ರಹ್ಮನು ಮೊಮ್ಮಗನು ರುದ್ರನು ಮೂ
ಜಗವನಾಳುವ ನಾರಾಯಣನಿವನು | ತಾನು
ಮಗುವಾಗಿ ದಶರಥಗುದಿಸಿದನು 8
ಮುನಿ ಯಾಗವ ಪಾಲಿಸಿ ವನಿತೆಯ ಶಾಪ ಬಿಡಿಸಿ
ತನ್ನೊಳಗಿಟ್ಟು ತಾ ಹುಡುಕಿದನು 9
ನರನಾಗಿ ದೈತ್ಯರ ಮುರಿದು ದೇವತೆಗಳಿಗೆ
ಗರಸನಾಗಿ ಸಾಕೇತಪುರದಿ ಪೊಳೆದ 10
ನರನು ಪಾಮರನು ಹ್ಯಾಗೆ ತಿಳಿಯುವನು | ಸಂಸೃತಿ
ಶರಧಿಯೊಳು ಬಿದ್ದು ಬಳಲುವನು11