ಒಟ್ಟು 5 ಕಡೆಗಳಲ್ಲಿ , 3 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಷ್ಟು ದಿನ ಇಂಥ ಸುಖ ಕಾಣಲಿಲ್ಲಕೃಷ್ಣ ಈ ದಿನ ನೋಡಿ ತುಷ್ಟನಾದೆನೊ ದೇವಾ ಪ ಆಟಗಳು ಸುಖವಲ್ಲ ಕೃಷ್ಣ ನೋಟಗಳು ಸುಖವಲ್ಲಪಾಠಗಳು ಸುಖವಲ್ಲ ಕೂಟವಲ್ಲತೋಟದೊಳು ರವಿಸುತನ ಕೂಟದೊಳು ಗೋಪಿಯರಆಟಕದ ಕೊಳಲೂದೊ ನೋಟ ಸ್ಮರಣೆಗೆ ತರುವೆ 1 ಏನು ಸೌಂದರ್ಯವೊ ಕೃಷ್ಣ ಏನು ಸೌಭಾಗ್ಯವೊಧೇನುಪಾಲನ ನೋಟಕಾಶ್ಚರ್ಯವೊನಾನು ಒಲ್ಲೆನು ಸೀದಾ ಆಣೆ ಮಾಡುವೆನೀಗಧೇನು ಮುಖ ಸಮ ತೋರಿ ಧ್ಯಾನ ತಪ್ಪಿಸೋ ಜಗದಿ 2 ಇಂದು ಬಾಯೊಳಗಿಟ್ಟುಮಂದಹಾಸವ ಮಾಡುತಿಂದಿರೇಶಕಂದರ್ಪಸಮರೂಪದಿಂದ ನೋಡುವೆನೀಗಸಿಂಧುನೊಳು ಮುಳುಗಿದೆನು ನಂದಬಾಲಕನೆ 3
--------------
ಇಂದಿರೇಶರು
ಗುರುವೆ ನಿಮ್ಮನು ನಾ ಮೊರೆಹೊಕ್ಕೆನಲ್ಲದೆ ಅರಿಯೆ ಅನ್ಯರನಿನ್ನು ಪೊರೆಯಿರೀಗ ಪ. ಸಿರಿಯರಸನ ತೋರಿ ಗುರುವೆ ಕರುಣಿಸಿರಿ ತರತಮ್ಯ ತಿಳಿಸುತ ಹರಿಸಿರಿ ಭವದುಃಖಅ.ಪ. ಬಂದೆನು ಭವದೊಳು ನಿಂದೆನು ತಾಪದಿ ಹಿಂದು ಮುಂದರಿಯದೆ ಕುಂದಿದೆನು ಬಂದು ಕರುಣದಿ ಆನಂದವ ನೀಡುತ ನಂದಕಂದನ ಲೀಲೆಯಿಂದ ರಕ್ಷಿಸಿದಿರಿ1 ಮುಸುಕಿದ ಅಜ್ಞಾನ ಹಸನಾಗಿ ತೊಲಗಿಸಿ ಕುಶಲದ ಮತಿಯಿತ್ತು ಪಾಲಿಸುತ ಬಿಸಜಾಕ್ಷನು ದಯ ಎಸೆವ ಕರುಣದಿಯಿತ್ತು ಘಸಣೆಗೊಳಿಸದಲೆ ವಸುಮತಿಯೊಳು ಪೊರೆವ 2 ಕಷ್ಟವಪಡಲಾರೆ ಸೃಷ್ಟಿಯೊಳಗಿನ್ನು ತಟ್ಟದೆ ಎನ್ನ ಮೊರೆ ಮನಸಿಗೀಗ ಕೊಟ್ಟು ಅಭಯವನು ಘಟ್ಯಾಗಿ ಪೊರೆಯಿರಿ ಕೆಟ್ಟ ಕಲ್ಮಷ ಕಳೆದು ಸೃಷ್ಟಿಗೊಡೆಯನ ತೋರಿ 3 ತಲ್ಲಣಿಸುತಿಹೆ ಕ್ಷುಲ್ಲ ದೇಹದಿ ಬಂದು ಒಲ್ಲೆನು ಈ ದುಃಖಭವ ಎಲ್ಲ ಮನಸು ನಿಮ್ಮ ಪಾದದಲಿರುವುದು ತಲ್ಲಣಗೊಳಿಸದೆ ಪೊರೆಯಿರಿ ಗುರುದೇವ 4 ತಂದೆ ಮುದ್ದುಮೋಹನವಿಠ್ಠಲನೆಂಬೊ ಇಂದಿರೇಶನ ಅಂಕಿತದಿ ಮೆರೆವೊ ಸುಂದರ ಗೋಪಾಲಕೃಷ್ಣವಿಠ್ಠಲನ ಎಂದೆಂದಿಗೂ ಮನಮಂದಿರದಲಿ ಕಾಂಬ 5
--------------
ಅಂಬಾಬಾಯಿ
ತೊರೆದು ಜೀವಿಸಬಹುದೆ ಗುರು ನಿಮ್ಮ ಚರಣವ ಪ. ಬರಿಯ ಮಾತಲ್ಲವಿದು ಜರಿದು ನುಡಿವೆ ಕರಕರೆಗೊಳಿಸದೆ ಕಾಯಬೇಕಿನ್ನು ಗುರು ಅ.ಪ. ಅತಿಶಯ ಮಹಿಮೆಯ ಹಿತದಿಂದ ತೋರಿದ ಪಿತನಂತೆ ಪೊರೆಯುವಚ್ಯುತ ದೂರ ಪದವೀವ ಮತಿವಂತರೆ ನಿಮ್ಮ ಕ್ಷಿತಿಯೊಳಗಲಲಾರೆ1 ನೀತಿಯ ಬೋಧಿಪ ಖ್ಯಾತಿ ಶ್ರೀ ಗುರುಗಳೆ ದೂತರಾದವರನು ಈ ತೆರ ಮಾಳ್ಪರೆ ಪಾತಕರಹಿತರೆ ಪ್ರೀತಿಯ ತೋರಿರಿ2 ಬಂದಿರಿ ಮಮತೆಲಿ ಕಂದರಂದದಿ ತಿಳಿದು ಇಂದಿರೇಶನ ತತ್ವಾವೃಂದಗಳರುಹುತ ಮಂದಿಗಳಿಗೆ ಆನಂದವನೆ ತೋರ್ದಿರಿ 3 ಎಲ್ಲಿ ಭಕ್ತರು ಕರಿಯೆ ಅಲ್ಲಿಗೆ ಬರುವ ಗುರುವೆ ಇಲ್ಲಿ ನಿಮ್ಮ ಹೊರತು ಇಲ್ಲವು ಇನ್ನೊಂದು ಒಲ್ಲೆನು ಈ ಜಗದ ನಿಲ್ಲದ ವಸ್ತುಗಳು 4 ಗೋಪಾಲಕೃಷ್ಣವಿಠ್ಠಲ ತಾ ಪರಿಪರಿ ಲೀಲ ವ್ಯಾಪ್ತ ಶ್ರೀ ಗುರು ಸಹ ಶ್ರೀಪತಿ ಹೃದಯದಿ ತೋರ್ಪಂತೆ ಕೃಪೆ ಮಾಡಿ ಕಾಪಾಡಬೇಕೊ ದೊರಿ 5
--------------
ಅಂಬಾಬಾಯಿ
ದುರ್ಜನರ ಸಂಗ ಎಂದಿಗೂ ಒಲ್ಲೆನು ಇಂಥ,ಸಜ್ಜನರ ಸಂಗದೊಳಗಿರಿಸೆನ್ನ ರಂಗ ಪ ಭಂಗ ರಂಗ 1 ನಂಬಿದ ಠಾವಿನಲಿ ಕೇಡನೆಣಿಪನ ಸಂಗಸಂಭ್ರಮದಿ ಜಗಳ ಕಾಯುವನ ಸಂಗಹಂಬಲಿಸಿ ಭವದ ಸುಖ ಮೆಚ್ಚಿದಾತನ ಸಂಗರಂಭೆಯರ ನೋಡಿ ಮೋಹಿಪನ ಸಂಗ2 ಕುಹಕ ಮಾಡುವಾತನ ಸಂಗಬಲು ಬೇಡೆ ಕೊಡದಿರುವ ಲೋಭಿ ಸಂಗಕುಲಹೀನರ ಕೂಡೆ ಸ್ನೇಹ ಬೆಳೆಪನ ಸಂಗಹಲವು ಮಾತಾಡಿ ಆಚರಿಸದನ ಸಂಗ3 ಗುರುಸತಿಗೆ ಪರಸತಿಗೆ ಎರಡು ಎಣಿಪನ ಸಂಗಗುರುನಿಂದೆ ಪರನಿಂದೆ ಮಾಡುವನ ಸಂಗಪರಹಿತಾರ್ಥದ ಧರ್ಮ ಪಡೆಯದಾತನ ಸಂಗಪರಮಪಾಮರ ಸಂಗ ಬಹುಭಂಗ ರಂಗ 4 ಭಂಗ 5
--------------
ಕನಕದಾಸ
ಪರಿ ನಿರ್ದಯಗೈದಿರಿ ತಂದೆ ಶ್ರೀ ಗುರುವೆ ಪೇಳಿ ಪ. ನೊಂದೆನು ಈ ದಿನ ನಿಮ್ಮ ವಾರ್ತೆ ತಿಳಿಯದೆ ಕುಂದೇನು ತೊರಿತೋ ಎನ್ನಿಂದ ಕ್ಷಮಿಸಿರಿ ಅ.ಪ. ಪ್ರತಿದಿನದಲಿ ನಿಮ್ಮ ಹಿತವಾರ್ತೆ ಕೇಳುತ ಅತಿಶಯಾನಂದವ ಪಡುತಲಿದ್ದೆ ಇಂದು ಅತಿಶಯದ ನಿಮ್ಮ ಹಿತವಾರ್ತೆ ತಿಳಿಯದೆ ಮತಿ ಹೀನಳಾಗಿಹೆ 1 ಉಲ್ಲಾಸಗೊಳಿಸುವ ಪುಲ್ಲನಾಭವ ಮಹಿಮೆ ಸೊಲ್ಲು ಸೊಲ್ಲಿಗೆ ನುಡಿಸಿ ಭವದಾಟಿಸಿ ಒಲ್ಲೆನು ನಾನೊಂದು ಇಹಪರ ಸೌಖ್ಯವು ನಿಲ್ಲಲಿ ಎನ್ನಮನ ನಿಮ್ಮ ಪಾದದಿ ನಿರುತ 2 ತನುಮನ ಒಪ್ಪಿಸಿ ಮನದಿ ಧ್ಯಾನಿಸುವುದು ಘನಮನಕಿನ್ನೀಗ ಬರಲಿಲ್ಲವೆ ವನಜಜಾಡಂಡದೊಳಿನ್ನು ಎನ್ನ ರಕ್ಷಿಸುವರ ಮನದಿ ನಾ ಕಾಣೆನು ವನಜಾಕ್ಷ ಬಲ್ಲನು 3 ಮೊರೆಯ ಕೇಳುತಲೀಗ ತ್ವರಿತದಿಂ ಬನ್ನಿರಿ ಸರಸಿಜಾಕ್ಷನ ತೋರಿ ಹರುಷವಿತ್ತು ದುರಿತವ ತೊಲಗಿಸಿ ಕರಕರಗೊಳಿಸದೆ ಪರಮಪ್ರಿಯರು ಎಂಬೊ ಬಿರುದುಳ್ಳ ಶ್ರೀ ಗುರುವೆ 4 ತಡಮಾಡದೆ ಭವಕಡಲ ದಾಟಿಸಿ ಈಗ ಮೃಡಸಖನನು ತೋರಿ ದೃಢ ಮನದಿ ಒಡೆಯ ಶ್ರೀ ಗೋಪಾಲಕೃಷ್ಣವಿಠ್ಠಲ ಜಗಕೆ ಬಿಡದೆ ಪೊರೆಯುವನೆಂಬೊ ದೃಢವೆನಗೆ ಕರುಣಿಸಿ 5
--------------
ಅಂಬಾಬಾಯಿ