ಕಷ್ಟ ತನುವಿನಲಿ ಹುಟ್ಟಿ ತೊಳಲುವಂಥಎಷ್ಟೆಂದು ತಾಳುವೆನೊ ಶ್ರೀರಂಗ ಪ
ಅಷ್ಟರೊಳೆಂದೆನ್ನ ಅವಗುಣವೆಣಿಸದೆ ಕಷ್ಟ ಪಡಿಸುವುದೇನು ಶ್ರೀರಂಗ ಅ
ನರಜನ್ಮವನು ಎತ್ತಿ ನರಕದೊಳಗೆ ಸುತ್ತಿಗುರಿ ಗೊತ್ತು ಕಾಣೆನಯ್ಯ ಶ್ರೀರಂಗಪರಮಪಾತಕನಾಗಿ ಹರಿ ನಿಮ್ಮ ಸ್ಮರಣೆಯನುಮರೆದು ಪಾಮರನಾದೆ ಶ್ರೀರಂಗ1
ಮಂದ ದು-ರ್ಮತಿಗೆ ಮರುಳಾದೆನೊ ಶ್ರೀರಂಗಅತುಳ ಪ್ರಪಂಚಕ್ಕೆ ಹಿತನಾಗಿ ದುಷ್ಟ ಸಂ-ಗತಿಯ ನಾನರಿದಿದ್ದೆನೊ ಶ್ರೀರಂಗ 2
ಮಿತಿಮೀರಿ ಮನ ಹರಿ ಪದವ ನೆನೆಯದೆ ಪರಸತಿಯರಿಗಳುಪಿದೆನೊ ಶ್ರೀರಂಗಕೃತಬುದ್ಧಿಯೊಳು ಉನ್ನತನಾಗಿ ತಾನೆರೆದುಸ್ತುತಿ ಮಾಡಿಕೊಂಡಿದ್ದೆನೈ ಶ್ರೀರಂಗ 3
ಆಶಾಪಾಶಗಳೆಂಬ ದೇಹಕ್ಕೆ ಸಿಲ್ಕಿ ಸ-ದ್ವಾಸನೆಯನು ಬಿಟ್ಟೆನು ಶ್ರೀರಂಗಮೋಸದಿಂದಾತ್ಮಘಾತುಕನಾಗಿ ಅಪರಾಧವೇಸೊಂದು ಮಾಡಿದೆನಯ್ಯ ಶ್ರೀರಂಗ 4
ಈಸಲಾರದೆ ಹೊಳೆಯಲಿ ಕಾಸಲಾರದೆ ಒಲೆಯಲಿಸೋಸುತ್ತ ಕುಳಿತಿಹೆನು ಶ್ರೀರಂಗವಾಸುಕಿ ಶಯನ ನೆಲೆಯಾದಿಕೇಶವ ನಿಮ್ಮಾಶ್ರಿತದಾಸರ ದಾಸನಯ್ಯ ಶ್ರೀರಂಗ 5