ಇದ್ದರಿರಬೇಕು ಸಂಸಾರಸುಖದಲ್ಹೀಗೆ
ಪದ್ಮಪತ್ರವು ಜಲದೊಳಗಿದ್ಹಾಂಗೆ ಧ್ರುವ
ನಡಿನಡಿಯಬೇಕ್ಹೀಂಗೆ ತಡಿಯೊಳರಿಬಿಡದ್ಹಾಂಗೆ
ನುಡಿನುಡಿಯಬೇಕು ಹರಿನುಡಿಸಿದ್ಹಾಂಗೆ
ಪಡೆದರಿದೇ ಪಡಿಯಬೇಕು ಹರಿ ಒಡಲ ಹುಗುವ್ಹಾಂಗೆ
ಅಡಿಗಡಿಗೆ ಹರಿಕೂಡಿ ಬಿಡದಗ್ಹಲದ್ಹಾಂಗೆ 1
ಇಡಗಿ ಇಡಬೇಕ್ಹಿಂಗೆ ಇಡಗರಿಗುಡಿಸಿದ್ಹಾಂಗೆ
ತುಡಗಿ ತುಡಬೇಕ್ಹೀಂಗೆ ತುಡಮಾಡಿಸದ್ಹಾಂಗೆ
ಉಡಗಿ ಉಡಬೇಕ್ಹೀಂಗೆ ಉಡಿಗರಿಗುಡಿಸಿದ್ಹಾಂಗೆ
ಮುಡಗಿ ಮುಡಿಬೇಕ್ಹಾಂಗ್ಹರಿಗೆ ಮುಡಿಸಿದ್ಹಾಂಗೆ 2
ಉಂಡರುಣಬೇಕ್ಹೀಂಗೆ ಉಂಡದರಿಗುಣಸಿದ್ಹಾಂಗೆ
ಕೊಂಡುದಕೋ ಹರಿಗೆ ಕೊಡಿಸಿದ್ಹಾಂಗೆ
ಮಂಡಣಿಯ ಮಾಡ್ಹೀಂಗೆ ಹರಿಗೆ ಮಂಡಿಸಿದ್ಹಾಂಗೆ
ಕೊಂಡು ಕೊಂಬುದು ಹರಿಕಂಡು ಒಲುವ್ಹಾಂಗೆ 3
ಮಲಗಿ ಏಳುವದ್ಹೀಂಗೆ ಮಲಗರಿಗೇಳಿಸಿದ್ಹಾಂಗೆ
ತಿಳವು ತಿಳವದು ಹರಿ ತಿಳಿಸಿದ್ಹಾಂಗೆ
ಸುಳವು ಸುಳವರು ಹರಿಸುಳಸ್ಯಾಡಿದ್ಹಾಂಗೆ
ಒಲವು ಮಾಡುವದ್ಹೀಂಗೆ ಹರಿಯ ಒಲಿವಾದ್ಹಾಂಗೆ 4
ರತಿಪಿಡಿದು ಹೀಂಗೆ ಹರಿಗತಿಯಾಗುವ್ಹಾಂಗೆ
ಅತಿಹರುಷ ಬಡು ಹರಿನೋಡುವ್ಹಾಂಗೆ
ಸಥಿಯ ಪಡೆದವುದು ಹೀಂಗರಿಯು ಸಥಿನಡಿಸಿದ್ಹಾಂಗೆಸ್ತುತಿಮಾಡುವ ಮಹಿಪತಿ ಪ್ರತಿಗಾಣದ್ಹಾಂಗೆ 5