ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಘಟಿಕಾಚಲದ ವಾಯುದೇವರನ್ನು ನೆನೆದು) ಒಲಿದು ಭಕ್ತನು ಸಲಹುವ ಘಟಿಕಾಚಲನಿವಾಸಿ ಹನುಮಾ ತ್ರಿಜಗದ್ವಲಯವÀ ನಡಸುವಿ ಪ. ಎರಡು ಭುಜಗಳನು ಧರಿಸಿ ಪ್ರಪಂಚದೊಳಗಿರುವ ನಿನ್ನ ರೂಪಾ ಸ್ಮರಿಸುವ ಜನರನು ಪೊರೆವ ದೊರೆಯೆ ಈರೆರಡು ಭುಜದಿ ಭೂಪಾ- ದರ ಸುದರ್ಶನಾಕ್ಷರ ಸಂಖ್ಯಾಂಗುಲಿ ವರಮಣಿಮಾಲೆಗಳಾ- ಧರಿಸಿ ಸನ್ಮುಖದೊಳಿರುವ ವಿಚಿತ್ರವನರಿವನಾವನಯ್ಯಾ ತೋರುವೆಯೊ 1 ಸರಮಣಿ ಹಸ್ತದಿ ಚರಿಸುವದೇನಿದು ಹರಿಯ ಗುಣಗಣಗಳೊ ಪರಿಪರಿಯಲಿ ನೀ ತರಿದಿಹ ದಿತಿಜರ ಶಿರಗಳ ಸಂಖ್ಯೆಗಳೊ ಬರುವ ಬ್ರಹ್ಮಪದ ಕುರುವರಿತಾಬ್ಧಗಳಿರವ ಚಿಂತಿಸುವುದೊ ನರಹರಿ ನಿನ್ನೊಳಗಿರಿಸಿದ ದೊರೆತನ ಚಿರತರ ಕಾರ್ಯಗಳೊ ಪರಿಹರಿಸದರನು 2 ಹಿಂದೆ ಅಂಜನಾನಂದನೆನಿಸುತ ಬಂದು ಧಾರುಣಿಯಲಿ ಇಂದಿರೇಶ ರಾಮನ ಪದಕಂಜದ್ವಂದ್ವ ಸಮಾಶ್ರೈಸಿ ಇಂದೀವರ ಸಖ ನಂದನನಿಗೆ ನಿಜ ಬಂಧುವಾಗಿ ಸಲಹಿ ಇಂದಿರಾ ಕೃತಿಗೆ ನಿಜ ರಾಮನ ಮುದ್ರೆಯ ಛಂದದಲಿ ಸಲಿಸಿ ಮುಷ್ಟಿಯಿಂಧೆಂದಿಸಿ ಮೆರೆದನೆ 3 ಸೋಮಕುಲದಿ ಜನಿಸ್ಯಾಮಹದೈತ್ಯರ ಸ್ತೋಮವ ನೆರೆ ತರಿದು ಭೂಮಿಜಾಂತಕನನೇಮದಿ ಜಗದೋದ್ದಾಮನ ಸರಿಸಿಗಿದೂ ಪಾಮರ ಕೀಚಕ ಬಕ ಕಿಮ್ಮೀರರ ನಾಮವಳಿಸಿ ಬಡಿದು ಭೂಮಿಪ ಕುರುಪನ ಹೋಮಿಸಿ ರಂಗದಿ ಕಾಮಿತಾರ್ಥಪಡದು ಧಾಮನಿರ್ಜರೋದ್ಧಾಮ ಸುಮಹಿಮ 4 ಕಲಿಯೊಳು ಮಿಥ್ಯಾವಾದಿಗಳಿಂದಲಿ ಕಲುಷಿತ ಸಜ್ಜನರ ವಾಸರ ಒಲುಮೆಯಿಂದಲುದಿಸಿ ಖಳರ ಕುಶಾಸ್ತ್ರದ ಬಲೆಗಳ ಖಂಡಿಸಿ ನಳಿನಜಾಂಡದೊಳಗೆ ಜಲಜನಾಭ ವೆಂಕಟಗಿರಿರಾಜನ ನೆಲೆಯ ತೋರಿ ಮೆರದೆ ಘಟಿಕಾಚಲದಲಿ ನೆಲಿಸಿದೆ 5
--------------
ತುಪಾಕಿ ವೆಂಕಟರಮಣಾಚಾರ್ಯ