ಮಹಿಮೆ ಸಾಲದೆ, ಇಷ್ಟೇ ಮಹಿಮೆ ಸಾಲದೆ ಪ
ಅಹಿಶಯನನ ಒಲುಮೆಯಿಂದಮಹಿಯೊಳೆಮ್ಮ ಶ್ರೀಪಾದರಾಯರ ಅ.ಪ
ಮುತ್ತಿನ ಕವಚ ಮೇಲ್ಕುಲಾವಿರತ್ನ ಕೆತ್ತಿದ ಕರ್ಣಕುಂಡಲಕಸ್ತೂರಿ ತಿಲಕ ಶ್ರೀಗಂಧ ಲೇಪನವಿಸ್ತರದಿಂದ ಮೆರೆದು ಬರುವ 1
ವಿಪ್ರ ಹತ್ಯ ದೋಷ ಬರಲುಕ್ಷಿಪ್ರ ಶಂಖೋದಕದಿ ಕಳೆಯೆಅಪ್ರಬುದ್ಧರು ದೂಷಿಸೆ ಗೇರೆಣ್ಣೆಕಪ್ಪು ವಸನ ಶುಭ್ರಮಾಡಿದ2
ಹರಿಗೆ ಸಮರ್ಪಿಸಿದ ನಾನಾಪರಿಯ ಶಾಕಗಳನು ಭುಂಜಿಸೆನರರು ನಗಲು ಶ್ರೀಶಕೃಷ್ಣನಕರುಣದಿಂದಲಿ ಹಸಿಯ ತೋರಿದ3