ಶ್ರೀಪತಿಯೆ ನಿನ್ನ ಒಲುಮೆಯೊಂದಿರಲಿಕ್ಕೆತಾಪಗಳಾವೆನಗೆ ಮಾಡುವವೊ ಪ
ಪಾಪಿಯಂತೆದೆನ್ನ ಕೈಯನು ಬಿಡಬೇಡಗೋಪಾಲನೆ ಎಲ್ಲಕ್ಕೂ ಕರ್ತೃ ನೀನಲ್ಲವೆ ಅ.ಪ.
ಭಾರ ಹೊತ್ತವನೆಂಬಅಂಶವನರಿಯದೆ ವ್ಯರ್ಥ ಬಳಲಿದೆನೊ 1
ಅಪಶಕುನಗಳು ಆ ವಿಘ್ನಗಳೆಲ್ಲವೂವಿಪರೀತ ಕಾಲವು ಉಪದ್ರವಂಗಳುಕೃಪೆಯಿಂದ ಪರಿಣಾಮಗೊಳ್ಳವೆಂದೆಂದಿಗೂಕೃಪೆಯ ಮಾಡಯ್ಯ ನೀ ಭಕ್ತವತ್ಸಲನೆ 2
ಯೋಚಿಸುವವ ನಾನು ಯೋಜಿಸುವ ನೀನುತೋಚದು ಗತಿಯೆಂದು ಚಿಂತಿಸುತಿರಲುಸೂಚನೆಗೊಡದೆ ಪರಿಹರಿಸಿ ಪೊರೆಯುವಿನಿಗಮಗೋಚರ ನಿನ್ನ ಕಾರುಣ್ಯವನರಿಯನೋ 3
ಅಂಬುಜಾಕ್ಷನೆ ನಿನ್ನ ನಂಬಿದ ಜನರನುಬೆಂಬಿಡದೆ ಕಾಯುವ ನೀ ಕೃಪಾಳೋತುಂಬ ಒಲುಮೆಯನೀಯೊ ನಿತ್ಯದಿ ಭಕ್ತಕು ಟುಂಬಿಯೆ ಗದುಗಿನ ವೀರನಾರಾಯಣ 4