ಅನಿಲ ಹೃತ್ಕಮಲಸ್ಥ | ಮುನಿ ವೇದವ್ಯಾಸಎನಗಿನ್ನು ತವಧ್ಯಾನ | ಸುಖವೀಯೊ ಶ್ರೀಶಾ ಪ
ಚಿದಚಿದ್ವ ಲಕ್ಷಣನೆ | ಚಿತ್ರ ಚಾರಿತ್ರನೇಚತುರಾಸ್ಯ ಪಿತ ನೀನು | ಸುರ ಚಕ್ರವರ್ತೀ |ಚತುರ ರೂಪವ ಧರಿಸಿ | ಚತುರ ವ್ಯೂಹವ ರಚಿಸಿಚತುರ ವಿಧ ಸೃಷ್ಟಿಯನು | ಚತುರ ವಿರಚಿಸಿದೇ1
ಮುನಿ ಪರಾಶರ ತನುಜ | ಶ್ರೀನಿಕೇತನ ಹರಿಯೆಎನಗರುಹು ವೇದಾರ್ಥ | ವೇದವೇದ್ಯಾ |ಘನ ಮಹಿಮ ಕೋಟಿ | ನಿಖಿಲಾಂಡ ನಾಯಕನೆಅನಘ ನೀ ಸಲಹಯ್ಯ | ಕಪಿಲ ರೂಪಾತ್ಮ 2
ಸಚ್ಛಾಸ್ತ್ರ ಕರ್ತೃ ಸತ್ | ಸೂತ್ರಗಳ ನಿರ್ಮಾತೃಸಚ್ಛಾಸ್ತ್ರ ಭಾವಗಳ | ಅರುಹೆ ವಿಬುಧರಿಗೇ |ಮತ್ಸ್ಯಾದಿ ರೂಪನಿ | ನ್ನಿಚ್ಛೆಯಿಂದಲಿ ಪೊಂದಿವತ್ಸರ್ಗೆ ಭೋದಿಸಿದೆ | ಸಚ್ಚಿದಾನಂದಾ 3
ಮೂಲ ಪ್ರಕೃತಿಯ ಮಾನಿ | ಮಹಾಲಕ್ಷ್ಮಿ ನಿನ್ನಯಶೀಲಗಳನನುಸರಿಸಿ | ಸೇವಿಸುವಳೂ |ಪ್ರಲಯ ಕಾಲದಿ ನಿನ್ನ | ಒಲುಮೆಗೋಸುಗ ವಟದಎಲೆಯ ರೂಪದಿ | ಮಲಗಲನು ವಾದಳಯ್ಯ 4
ಮೂರ್ತಿ | ಬದರಿ ಕ್ಷೇತ್ರದಿ ಪೂರ್ಣಭೋದರ ಸುಸೇವೆಯನೆ | ಸತತ ಕೊಳುತಾ |ಮೋದ ಗುಣ ಪೂರ್ಣ ಗುರು | ಗೋವಿಂದ ವಿಠ್ಠಲನೆಹೇ ದಯಾಂಬುಧೆ ನಿನ್ನ | ಪಾದಾಬ್ಜ ತೋರೋ 5