ಮನವೇ ನೀನೆಚ್ಚರಿಕೆ ಬಿಡದಿರು
ಅನುದಿನವು ಹರಿಧ್ಯಾನದೊಳಗಿರು ಪ
ವನಿತೆ ಧನಧಾರಿಣಿಯ ನೆಚ್ಚಿ
ತನುವೆ ತಾನೆಂಬುದನುಚಿತವು ಅ.ಪ
ಬರಿಯಕೈಯಲಿ ಭೂಮಿಗಳಿಸಿದೆ
ದುರಿತಭಾರವ ಧರಿಸಿರ್ಪೆ
ನರರೆ ಹರಿಸುವರಾರೋ ಕಾಣಿರ
ಅರಿತುಕೊಂಡಿರೆ ತಿಳಿಸಿರೈ 1
ಕಾಯವಸ್ಥಿರ ಹೇಮಸಂಸ್ಕøತಿ
ಮಾಯಾಪಾಶದ ಬಲೆಗೆ ಸಿಲ್ಕಿ
ನಾಯಿನರಿಯಂದದಲಿ ತೊಳಲಿ
ಸಾಯವರ ಕಂಡಳುವದೇಕೋ 2
ಜಾತಿಧನವಧಿಕಾರ ಖ್ಯಾತಿಗೆ
ಆತುರದೊಳಭಿಮಾನ ಪಡುವೇ
ಪಾತಕರೆ ಹಿಂಜರಿಯದಂತೇ
ಪ್ರೀತಿಯಿಂ ಪರಪೀಡೆಗೈವೇ 3
ಪೊಡವಿಯೊಳ್ ಪೆಣ್ ಬಾಲ ವೃದ್ಧರು
ಬಡವರಾರ್ತರು ಕುಂಟಕುರುಡರು
ಎಡೆಯ ಜೀವಿಗಳನ್ನು ಕರುಣದಿ
ಕಾಣೆಲೋ ಕಡುಜಾಣನೇ 4
ಸತ್ತಮೇಲೇನೆಂದು ಯೋಚಿಸು
ಮುತ್ತಿ ಕತ್ತಿಯೊಳಿರಿವರೈ
[ಮ]ತ್ತಕ್ಷಣದ ಫಲಕಾಶೆಪಡದಿರು
ಸತ್ಯವಂ ಪಿಡಿ ನಿತ್ಯವೂ 5
ಯಮುನೆ ಹೊಕ್ಕರು ಯಮನು ಬಿಡನೂ
ಅಮಮ ನರಕದೊಳಿಳಿಪರೈ
ರಮಾರಮಣನ ಒಲುಮೆಗಾಗಿ
ಶ್ರಮಿಸಿ ಪರರುಪಕಾರಿಯಾಗೋ6
ಪತಿತಪಾವನ ಜಾಜಿಕೇಶವ
ನತಿಶಯದಿ ತಾ ಜಗವ ಪಾಲಿಪ
ಚತುರ್ವೇದ ಶ್ರುತಿ ಪ್ರಮಾಣವ
ಮತಿಯುತರು ಮೀರುವರೆ ಮರುಳೇ 7