ಒಟ್ಟು 6 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೇಳಿಪೇಳಮ್ಮ ನಮ್ಮಮ್ಮ ಲಕುಮೀ ಪ ಕೇಳಿಪೇಳೆ ಹರಿಯಲಿ ಪೋಗಿ ಬಹಳ ಸೋಕಿನವ ಗೋಪಿಬಾಲೀಯರಿಗೆ ಮೆಚ್ಚಿ ಬಹು ಜಾಲವ ಮಾಡಿದ ಕೃಷ್ಣನ ಅ.ಪ. ಪ್ರಳಯ ಕಾಲದಲ್ಲಿ ಆಲದೆಲೆ ಮೇಲೆ ಮಲಗಿಪ್ಪನುಒಲುಮಿಗಳ ಒಲುಮಿಕಾಂತ ಲಲನೆ ನೀನು ಕಮಲಾದೇವಿ 1 ನಿತ್ಯಮುಕ್ತೆ ನಿತ್ಯತೃಪ್ತೆ ನಿತ್ಯಾವಿಯೋಗಿನಿ ಹರಿಗೆಭೃತ್ಯನಲ್ಲೆ ನಾನು ಸ್ವಲ್ಪ ಚಿತ್ತವಿಟ್ಟು ನೋಡೆ ತಾಯಿ 2 ನಿನ್ನ ಹೊರತು ಆತನನ್ನು ತೋರುವರ ಕಾಣೆನಮ್ಮಸನ್ನುತಾಂಗಿ ಸಾರಸಾಕ್ಷಿ ಎನ್ನೊಳು ಕರುಣವ ಮಾಡೇ 3 ಎಲ್ಲ ದಿವಿಜರಲ್ಲಿ ಪೋಗೆ ಬಲುಬಗೆ ಪೇಳಿಕೊಂಡೆಫುಲ್ಲನಾಭನಲ್ಲಿ ಒಂದು ಸೊಲ್ಲನಾಡೋ ಶಕ್ತಿಯಿಲ್ಲ 4 ಪಾದ ಬಾಲ್ಯದಿಂದ ಸೇರಿದ್ದಕ್ಕೆನೀರಜಾಕ್ಷನನ್ನು ತೋರೆ ಭಾರಿ ಫಲವಾಯಿತೆಂಬೆ 5 ನಿಮ್ಮ ಮಾತು ಮೀರ ಶೂರ ನಮ್ಮ ಮಾರಜನಕ ಕೃಷ್ಣಅಮರ ತರುವ ಕಿತ್ತಿ ನಿಮ್ಮ ಮನೆಯೊಳ ಹಚ್ಚಿದನಂತೆ 6 ಸುಂದರಿ ಸೌಭಾಗ್ಯವಂತೆ ಮಂದಿರದೋಳಿಪ್ಪನನ್ನುಇಂದಿರೇಶನನ್ನು ತೋರೆ ನಂದ ಬಾಲ ಮಹಿಳೆ ಅಂಬಾ 7
--------------
ಇಂದಿರೇಶರು
ಜಯ ಜಯ ಮಂಗಳವೆನ್ನಿರೇ ಶ್ರಯಕರ ದತ್ತಾತ್ರೇಯ ಮೂರ್ತಿಗೆ ಪ ನೋಡಿ ಭಾರವ ಕೊಂಡು ನಿಂದುವದಗಿ ಬಂದು ಬೇಡಿದ ಕೊಡಲಿಕ್ಕೆ ಬಲುಧೀರನು ಮಾಡಿ ವಿಷಂ ಮೃತಮತಿಗೋಚರವಾಚಿ ರೂಢಿಸಿ ಹೊರೆವ ಸುಧಯ ನಿಧಿಗೆ 1 ಶಳವಿಗೆ ಹಾರಿಸದೆ ಶರಣಾವಗ ವಿಡಿ ದಿಳೆಯ ಸುಖವನಿತ್ತುದುರಿತ್ಹರಿಸಿ ತಿಳಿಯಲಣುಗತಪ್ಪ ತಾಯಿ ನೋಡದ ಸ್ಥಿರ ಒಲುಮಿ ಮೋಹನ ಬುದ್ಧಿಮಲಹಾರಿಗೆ 2 ಪೊಳೆವೆದೆಯೊಳು ನೆನಪಿಗೆ ಮೈಯ್ಯಾಲಿದು ಹರಿಸಿಲುವಾ ಮನೋರಾಮನುತ ಭಕ್ತಿಗೆ ಫಲ ಶಾಖನರೆನುಂಡು ಶಿಶುವಾಗಿರುವನಮ್ಮ ಸಲಹುವ ಮಹಿಪತಿ ಸುತ ಪ್ರಿಯಗೆ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೀ ಯನ್ನ ಸಲಹುತಿಹೆ ಜನುಮ ಜನುಮಗಳಲ್ಲಿ| ದಾನವಾರಿಯೆ ಉರಗಶಯನ ಸಿರಿರಂಗರೇಯಾ ಪ ಮುದದಿಂದ ತನ್ನ ಮಕ್ಕಳನು ತಾ ನೆನಿಯಲಿಕೆ| ಅದರಿಂದ ಪದಳಿಸುವ ಕಮಠದಂತೆ| ಉದರದಲಿ ನವಮಾಸ ವಾಸಾಗಿ ಬೆಳೆಯುತಿರೆ| ಪದುನಾಭನೆ ನಿಮ್ಮದಯದಿ ವರ್ಧಿಸಿದೆನಯ್ಯಾ 1 ಜಲಧಿಯೊಳಗ ತನ್ನ ನೋಟದಿ ನೋಡಲಾಕ್ಷಣ ದಿ| ಎಳೆಮೀನಗಳು ಬಹಳ ಸುಖಿಸುವಂತೆ| ಇಳೆಯೊಳಗ ಜನಿಸಿದ ಬಳಿಕ ಕರುಣ ನೋಟದಾ| ಒಲುಮಿಂದ ಸಕಲ ಸೌಖ್ಯದಲಿರುತಿಹೆನಯ್ಯಾ 2 ನಂದನನು ಪೋಷಿಸುವ ಮಾತೆಯಂದದದಿ ದುರಿತ| ಬಂದಡರೆ ಅಡಿಗಡಿಗೆ ಪರಿಹರಿಸುತಾ| ಕುಂದ ದಾವಾಗ ರಕ್ಷಿಪೆ ತಂದೆ ಮಹಿಪತಿ ಕಂದ ನೊಡಿಯನೇ ಚಿದಾನಂದ ಮೂರುತಿ ದೇವಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಏನು ಮಾಡಿದರೇನು ಏನು ನೋಡಿದರೇನುದಾನವಾಂತಕ ನಿನ್ನನರಿಯದ ಪಾಪಿ ಪನಾನಾದೇಶವ ತಿರುಗಿ ಯಾತ್ರೆ ಮಾಡಿದರೇನುನಾನಾತೀರ್ಥವ ಮುಳುಗಿ ಸ್ನಾನ ಮಾಡಿದರೇನುನಾನಾಕ್ಷೇತ್ರದಿನಿಂದುದಾನ ಮಾಡಿದರೇನುದೀನರಕ್ಷಕ ನಿನ್ನ ಒಲುಮಿಲ್ಲದವರು 1ನಾನಾಗುಹೆಗಳ ಪೊಕ್ಕು ತಪವ ಮಾಡಿದರೇನುಮೌನದಿಂ ಕುರಿತು ಬಲುಜಪ ಮಾಡಿದರೇನುನಾನಾಶಾಸ್ತ್ರವ ಅರ್ಥಮಾಡಿದರೇನುಜಾನಕೀಶನೆ ನಿನ್ನ ದಯವಿಲ್ಲದವರು 2ನಾನಾಗುಡಿಗಳ ಪೊಕ್ಕು ಪ್ರತಿಮೆ ನೋಡಿದರೇನುನಾನಾಸತ್ಯರ ಮುಖವನಿತ್ಯನೋಡಿದರೇನುಧ್ಯಾನಿಕರಸುಲಭ ಶ್ರೀರಾಮ ನಿನ್ನಡಿಕುಸುಮಕಾಣದಧಮರು ಈ ಜಗದೊಳಗೆ ಪುಟ್ಟಿ 3
--------------
ರಾಮದಾಸರು
ನುಹುಡಿಯ ಹೊರಳ್ಯೇನು ಬಡಕೊಂಡರೇಕಡಲಶಯನನೊಳು ದೃಢ ಭಕ್ತಿ ಇರದೆ ಪ.ಐದು ಪಾವಕನೊಳು ಮೈ ದಹಿಸಿದರೇನುಒಯ್ದು ಶ್ವಾಸವ ನೆತ್ತಿಲಿಟ್ಟರೇನುತೊಯ್ದುಟ್ಟರಿವೆ ತುದಿಗಾಲಲಿ ನಿಂತೇನುಮೈದುನಸಖನಂಘ್ರಿ ಪೂಜಿಸದನಕ 1ತೊಪ್ಪಲ ಮೆದ್ದಗ ತಪ್ಪಲ ಸೇರೇನುಉಪ್ಪವಾಸನಿಲವ ನುಂಗಲೇಸುಒಪ್ಪುವ ಇಳೆಯ ಸುತ್ತಾಡಿ ದಣಿದರೇನುದರ್ಪಕನಯ್ಯನ ಒಲುಮಿಲ್ಲದನಕ 2ಮಧ್ವಸರೋವರ ಮೀಯದ ಜನುಮೇನುಮುದ್ದುಕೃಷ್ಣನ ನೋಡದಕ್ಷಿಯೇನುಮಧ್ವೇಶ ಪ್ರಸನ್ವೆಂಕಟೇಶನೊಪ್ಪಿರದವನಿದ್ದೇನು ಇಲ್ಲದೇನೀಧರೆಗೆ 3
--------------
ಪ್ರಸನ್ನವೆಂಕಟದಾಸರು