ಪೆಣ್ಣೆಂದರಿದು ಮೆಚ್ಚಿ ಕೆಡಬೇಡ ನಿನ್ನ
ತಿನ್ನುವ ಮರಿಗಿದು ತಿಳಿ ಮೂಢ ಪ
ತಾಯಾಗಿ ಮೊದಲು ನಿನ್ನ್ಹಡೆದಿಹ್ಯದು ಪುನ:
ಮಾಯಾಗಿ ಬೆನ್ನ್ಹತ್ತಿ ಸುಡುತಿಹ್ಯದು
ಬಾಯೊಳು ಮೊಲೆಯಿಟ್ಟು ಬೆಳೆಸಿಹ್ಯದು ಮತ್ತು
ಕೈಯೊಳು ಮೊಲೆಯಿಟ್ಟು ಕೊಲುತಿಹ್ಯದು 1
ಸುತನೆಂದು ಮುದ್ದಿಟ್ಟು ಒಲುತಿಹ್ಯದು ಮತ್ತು
ಪತಿಯೆಂದು ನಿಜಮತಿ ಸುಲಿತಿಹ್ಯದು
ರತಿಗೊಟ್ಟು ಅತಿಮೋಹದಾಡುವುದು ನಿನ್ನ
ಗತಿಗೆಡಿಸಿ ಜವಗೀಡು ಮಾಡುವುದು 2
ಕಣ್ಣುಸನ್ನೆಯ ಮಾಡಿ ಕರಿತಿಹ್ಯದು ಬಹು
ಬಣ್ಣ ಮಾತಾಡಿ ಸೋಲಿಪುದು
ಕುನ್ನಿಯಂತೆ ನಿನ್ನ ಮಾಡುವುದು ಬಲು
ಬನ್ನಬಡಿಸಿ ಬಾಯಿ ಬಿಡಿಸುವುದು 3
ಶ್ವಾನನಂದದಿ ಕೂಗಲ್ಹಚ್ಚುವುದು
ಮಾನಾಭಿಮಾನ ತೊರೆಸುವುದು ನಿಜ
ಜ್ಞಾನಕೆಡಿಸಿ ಪಾಪದ್ಹಾಕುವುದು 4
ತಂದ ಪುಣ್ಯವನೆಲ್ಲ ಸೆಳೆತಿಹ್ಯದು ಬಲು
ಮಂದನೆನಿಸಿ ಕುಣಿಸ್ಯಾಡುವುದು
ತಂದೆ ಶ್ರೀರಾಮಪ್ರೇಮ ಕೆಡಿಸುವುದು ನಿಜಾ
ನಂದ ಮುಕ್ತಿಗೆ ಕಿಡಿ ಹಾಕುವುದು 5