ಶ್ರೀಪತಿಕೇಶವ ಒಲೀ ಒಲೀ ಪ
ಸನ್ನುತ ಗೋಪೀನಂದನ ನಲೀ ನಲೀ ಅ.ಪ
ನಳಿನನಾಭ ಮಾಂಗಿರಿಪತಿಯೆನ್ನಯ
ಕೊಳೆಯಾವರಣವ ಸುಲೀ ಸುಲೀ || 1
ವಂದಿಸುವಗಾನಂದವನೀಯಲು
ನೊಂದಿಹ ಭಕ್ತರ ಬಂಧನ ನೀಗಲು
ನಿಂದು ನಲಿದು ನೀ ಕುಣೀ ಕುಣೀ 2
ಪಾಡಿಪೊಗಳಿ ಕೊಂಡಾಡುವರೆಡೆಯೊಳು | ದಯ
ಬೇಡಿದ ವರಗಳ ನೀಡುತೆ ಭಕ್ತರು
ಮಾಡಿದ ಪಾಪವ ಸೆಣೀ ಸೆಣೀ 3