ರಾಮಚಂದ್ರ ಹರಿ ವಿಠಲ | ನೀನಿವನ ಸಲಹೋ ಪ
ಕರ ಪಿಡಿದು | ಕಾಮಿತವನಿತ್ತುಅ.ಪ.
ಕರ ಪಿಡಿಯಯ್ಯ | ಪ್ರಹ್ಲಾದ ವರದಾಮರುತ ಮತ ದೀಕ್ಷೆಯಲಿ | ದೃಢವಾದ ಮತಿಯಿತ್ತುವರಗಳನೆ ನೀಡುವುದು | ಮರುತಾಂತರಾತ್ಮಾ 1
ತಾರತಮ್ಯವ ತಿಳಿಸೊ | ಪಂಚ ಭೇಧವ ತಿಳಿಸೋಕಾರ್ಯ ಕಾರಣ ನೀನೇ | ಬೇಡುವೆನು ನಿನ್ನಾಹರಿಯು ಸರ್ವೋತ್ತಮನು | ಮರುತ ಜೀವೋತ್ತಮನುನಿರುತ ನೀ ಸುಜ್ಞಾನ | ಅರಿವನೀಯುತ ಸ್ವಾಮೀ2
ನಾನು ನನ್ನದು ಎಂಬ | ಸಂಸ್ಕಾರವನೆ ಕಳೆದುನೀನು ನೀನೇ ಎಂಬ | ಉಪಾಯ ಒಲಿಸೇಕಾಣಿಸೋ ಹೃದ್ಗುಹದಿ | ಗಾನಲೋಲನೆ ದೇವಕೊನೇರಿ ವಾಸ ಹರಿ | ಪ್ರಾರ್ಥಿಸುವೆ ನಿನ್ನಾ 3
ಪತಿ ಅದ್ವೈತ ಸಿರಿ ಜಾನಕೀ ಪತಿಯೇ 4
ಕರ | ಪಿಡಿದು ಉದ್ಧರಿಸುತಲಿಪೊರೆಯೊ ಗುರು ಗೋವಿಂದ | ವಿಠಲ ಕಾರುಣ್ಯ 5