ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾತಕವನಿಯೊಳ್ ಜನಿಸಿದೆ ನಾನು ಸಾರ್ಥಕೇನು ನಾನು ಕೋತಿ ಸಾರ್ಥಕೇನು ಪ ಶರಧಿ ಹಾರಿ ಉರಿವಿಲಂಕೆಯನರಿವೆನೇನೊ ವಾರ್ತೆ ತಿರುಗಿ ಮಾರ್ಗವ ಮಾಡಿ ಮಾತೆಯ ತರುವೆನೇನೊ 1 ಕಿತ್ತು ಸಂಜೀವನವ ಬೆಟ್ಟಲ್ಲಿರಿಸುವೆನೇನೊ ರಾಮ- ರ್ಹತ್ತಿಸ್ವಾಹನನಾಗಿ ಖ್ಯಾತಿಪಡೆವೆನೇನೊ 2 ಇಂದಿರೇಶ ಕೊಡಲು ಪದವಿ ಒಲ್ಲೆಂಬೆನೇನೊ ರಾಮ- ರೆಂಜಲೆಲೆಗ್ಹಾರೈಸಿ ಕದ್ದೊಯ್ದುಂಬೆನೇನೊ 3 ಮುನ್ನ ಹರಿಯ ಸೇವೆಗೆಂದು ಜನಿಸಿದೆನೇನೊ ಧರೆಯೊಳ್ ಧರ್ಮ ಮೀರದೆ ನಡೆದು ಖ್ಯಾತಿ ಪಡೆವೆನೇನೊ 4 ರಾಜಸೂಯಯಾಗಾಶ್ವಮೇಧ ಸಾಧಿಸುವೆನೇನೊ ರಾಜ್ಯ ಭೇದಿಸಿ ಶತ್ರುಗಳಿಗೆ ಭಯವ ತೋರುವೆನೇನೊ 5 ಕ್ಲೇಶಮನಕಿಲ್ಲದೆ ವನವಾಸ ಸಹಿಸುವೆನೇನೊ ಅಜ್ಞಾತ- ವಾಸೊಂದುಕ್ಷಣ ಪರಿಯಂತರ ಚರಿಸುವೆನೇನೊ 6 ಭಿಕ್ಷೆತನಕೊಂಬೊ ಸಜ್ಜನರಿಗೆ ನಮಿಸುವೆನೇನೊ ಬೋರೆ- ವೃಕ್ಷಮೂಲದಲ್ಲಿ ಆವಾಸ ಬಯಸುವೆನೇನೊ7 ಪಾದಕ್ಕೆರಗುವೆ ಪ್ರಾಣೇಶ ನೀ ಪಾಲಿಸುವ್ಯೇನೊ ಜ್ಞಾನ ಆದಿಮೂರುತಿ ವೇದವ್ಯಾಸನ ಒಲಿಸುವೆನೇನೊ 8 ಬಿಟ್ಟು ಚಲಿಸದೆ ನಿನ್ನಲ್ಲೆ ಮನಸಿಟ್ಟೇನೇನೊ ವಾ- ಸಿಷ್ಠ ಭೀಮೇಶಕೃಷ್ಣನ ಭಜಿಸುತ್ತಿರುವೆನೇನೊ 9
--------------
ಹರಪನಹಳ್ಳಿಭೀಮವ್ವ