ಗುರುಕೂರ್ಮಚಾರ್ಯರ ಚರಣಕಮಲಯುಗ್ಮ
ಮಾನವ ಪ
ಧರಣಿಯೊಳಗೆ ಸುಕ್ಷೇತ್ರಗಾಲವ
ಪುರದಿ ಶ್ರಿ ನರಶಿಂಹಾ ಚಾರ್ಯರ
ತರುಣಿಯಳ ಗರ್ಭಾಬ್ಧಿಯಲಿಹಿಮ
ಕರನ ತೆರದಲಿ ಜನಿಸಿಮೆರೆದ ಅ.ಪ
ವರಕೊಲ್ಹಾಪುರದಿ ಪೋಗಿರಲು ಸುಂದರವಾದ
ಸಿರಿಯರೂಪವ ಕಾಣುತ್ತ
ಅರಿತು ಪ್ರಾರ್ಥಿಸಲು ಶ್ರೀ ನರಶಿಂಹಾರ್ಯರಿಗೊಲಿದು
ಕರುಣದಿಂದಲಿ ಕೊಟ್ಟಂಥ ಚರಣಕವಚ
ಸ್ವರಣ ಸಂಪುಟದಲ್ಲಿ ನಿರುತ ಪೂಜೆಯ ಮಾಡುತ್ತ
ಪ್ರವಚನಾಸಕ್ತ ಧರೆಯೊಳಗೆ ಬಹು
ಶರಣು ಜನ ರಘ ತರಿದು ಸೌಖ್ಯವ ಗರಿವುದಕೆ ಸಂ
ಚರಿಸುತಲಿ ಸಚ್ಛಾಸ್ತ್ರ ಮರ್ಮವ ನರುಹಿಜನರನುದ್ಧರಿಸಿದಂಥ 1
ಪೊಳೆವ ಫಾಲದಿ ಪುಂಡ್ರ ತಿಲಕ ಮುದ್ರಾಕ್ಷತಿ
ವಿಲಸಿತ ಶುಭಗಾತ್ರದಿ
ಅಲವ ಬೋಧರ ಮತದೊಳು ತತ್ವಬೋಧಕ
ಸುಲಲಿತೋಪನ್ಯಾಸದಿ
ಬಲು ವಿಧಾರ್ಥವ ಪೇಳಿಕುಳಿತಪಂಡಿತರನ್ನು
ಒಲಿಸುತಿರೆ ಪೂರ್ವದಿ ಪಂಢರಪುರದಿ
ಭವ ಮುದ್ಗಲಾಚಾರ್ಯರಿ
ಗೊಲಿದು ಬಂದಿಹ ಚಲುವ ವಿಠ್ಠಲ ಮೂರುತಿಯ ಪದ
ಜಲಜ ಮಧುಕರರೆನಿಸಿದಂಥ 2
ಜಡಜಾಪ್ತನುದಯದಿ ನಡೆದು ದ್ವಿಜಗೃಹದೇವ
ರಡಿ ಗೊಂದನೆಯ ಮಾಡುತ್ತ
ಎಡೆಬಿಡದಲೆ ತಮ್ಮ ಅಡಿಗೊಂದಿಸುವ ಭಕ್ತ
ಗಡಣವ ಮನ್ನಿಸುತ ಬಿಡದೆ ಶತತ್ರಯ
ಕೊಡ ಜಲದಲಿ ಸ್ನಾನ ದೃಢಮನದಲಿ
ಮಾಡುತ್ತ ತಂತ್ರ ಸಾರೋಕ್ತ
ಎಡಬಲದಿ ಶೇವೆಯನು ಮಾಡುವ
ಪೊಡವಿಸುರಕೃತ ವೇದ ಘೋಷದಿ
ಜಡಜನಾಭನ ಪೂಜಿಸುವ ಬಹು
ಸಡಗರವ ನಾನೆಂತು ಬಣ್ಣಿಪೆ 3
ಭೂತಲದಲಿ ಶ್ರೇಷ್ಠವಾತ ಮಾತಾಂಬುಧಿ
ಶೀತ ಕಿರಣನೆನಿಸಿ
ಪ್ರಾತರಾರಭ್ಯ ಶ್ರೀನಾಥನೆ ಪರನೆಂಬೊ
ಶಾಸ್ತ್ರದಿ ಮನವಿರಿಸಿ
ಖ್ಯಾತ ಸತ್ಯಧ್ಯಾನ ತೀರ್ಥರೆಂಬುವ ಗುರು
ಪ್ರೀತಿಯ ಸಂಪಾದಿಸಿ ಪುತ್ರರಿಗೆ ಬೋಧಿಸಿ
ಪ್ರೀತಿಯಲಿ ಶಿಷ್ಯರಿಗೆ ಭಗವ
ದ್ಗೀತೆಯನು ಪ್ರತಿದಿನದಿ ಪೇಳುತ
ಪಾತಕವ ಪರಿಹರಿಸಿ ಪರಮ ಪು-
ನೀತ ಗಾತ್ರರ ಮಾಡಿ ಸಲಹಿದ 4
ಧರೆಯೊಳಧಿಕಮಾದ ಗಿರಿ ವೇಂಕಟೇಶನ
ದರುಶನವನೆ ಕೊಳ್ಳುತ
ಗುರುವಾಜ್ಞೆಯಲಿ ಬಂದು ವರ ಸಭೆಯೊಳು ತಮ್ಮ
ಪರಿವಾರದಿಂದಿರುತ ವರಷ ಶಾರ್ವರಿಯೊಳು
ವರ ಮಾಘ ಪ್ರತಿಪದ
ಬರಲು ಧ್ಯಾನವ ಮಾಡುವ ಹರಿಪದಾಸಕ್ತ
ಪರಮ ಭಕುತಿಯಲಿಂದ ಶೇವಿಪ
ಶರಣು ಜನ ಮಂದಾರ ನೆನಿಸುತ
ಮೆರೆವ ಕಾರ್ಪರ ನಿಲಯ
ಶಿರಿನರ ಹರಿಯ ಪುರವನು ತ್ವರದಿ ಶೇರಿದ 5