ವರ್ಣಿಸಲಳವೆ ಸುಗುಣಸಾಂದ್ರನ ಪ
ಕರ್ಣಜನಕಕೋಟಿ ತೇಜಶ್ರೀಶ ಭಜಕ ಜಯ ಮುನೀಂದ್ರನ ಅ.ಪ
ಸೂತ್ರ ನೇತ್ರದಿಂದಬದ್ಧಮಾಡಿ ಪಿಡಿದು ಕಡೆದುಶುದ್ಧ ಯುಕುತಿ ಸುಧೆಯ ತೆಗೆದನ ಶಿಷ್ಯ ಜನಕೆಶ್ರದ್ಧೆಯಿಂದಲದನು ಎರೆದನ ಕ್ರೋಧದಿಂದಕೃದ್ಧವಾದಿಗಳನು ಗೆಲಿದನ-ಜಯ ಮುನೀಂದ್ರನ 1
ಮಾನನೀಯ ಶೀಲರಾದಮಾನವರನು ಕರೆದು ಹರಿಯಧ್ಯಾನದಲ್ಲಿ ನಿಲಿಸಿ ಒಲಿಸಿಹಾನಿಯಿಲ್ಲದ ಮುಕುತಿ ಪಡೆದಜ್ಞಾನಮತವ ಜನಕೆ ಸಾರ್ದನ, ಶಿಷ್ಯಜನಕೆಸಾನುರಾಗದಿ ತತ್ವಪೇಳ್ದನಜಯ ಮುನೀಂದ್ರನ2
ಸರಸದಿಂದ ಮೂರ್ಯೋಳುವಿರಸ ದುಷ್ಟ ಭಾಷ್ಯಗಳನುಮುರಿದಕ್ಷೋಭ್ಯ ತೀರ್ಥಯತಿಪಕರಸಂಜಾತ ರಮ್ಯಚರಿತಶರಣ ಜನರ ಪೊರೆವ ಯತಿಪನ, ಶಿಷ್ಯಜನರಮರುಳ ಮೋಹತಿಮಿರ ದಿನಪನ, ನಮ್ಮ ಪರಮಗುರು ಶ್ರೀಕೃಷ್ಣ ಪಾದಭಜಕನಜಯ ಮುನೀಂದ್ರನ3